ನವದೆಹಲಿ,ಜೂನ್,30,2021(www.justkannada.in): ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಿ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಈ ಸಂಬಂಧ ಆದೇಶ ಹೊರಡಿಸಿರುವ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ, ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ 6 ತಿಂಗಳಲ್ಲಿ ಪರಿಹಾರ ನೀಡಿಬೇಕು. ಪರಿಹಾರದ ಮೊತ್ತವನ್ನ ಸರ್ಕಾರವೇ ನಿರ್ಧರಿಸಬೇಕು. ಪರಿಹಾರ ನೀಡುವ ಕುರಿತು ಮಾರ್ಗಸೂಚಿ ರೂಪಿಸಬೇಕು. ಎನ್ ಡಿಎಂಎ ಆರು ತಿಂಗಳಲ್ಲಿ ಮಾರ್ಗಸೂಚಿ ರೂಪಿಸಬೇಕು. ಪರಿಹಾರದ ಮೊತ್ತ ಎನ್ ಡಿಎಂಎ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದೆ.
ಪರಿಹಾರ ಬಗ್ಗೆ ಎನ್ ಡಿಎಂಎ ಮಾರ್ಗಸೂಚಿ ರೂಪಿಸದೇ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಅಶೋಕ್ ಭೂಷಣ್ ನೇತೃತ್ವದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
Key words: compensation-family – deceased – Corona-Supreme Court – order.