ಬಾಗಲಕೋಟೆ,ಡಿಸೆಂಬರ್,14,2022(www.justkannada.in): ಒಂದೇ ಟೀಮ್ ಆದರೇ ಇಡೀ ರಾಜ್ಯವನ್ನ ಸಂಚರಿಸಲು ಆಗಲ್ಲ. ಹೀಗಾಗಿ ಬಸ್ ಯಾತ್ರೆಗೆ ಎರಡು ಟೀಮ್ ಮಾಡಿಕೊಂಡು ಪ್ರವಾಸ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ತಿಳಿಸಿದರು.
ಈ ಕುರಿತು ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಒಂದು ಟೀಮ್ ನಲ್ಲಿ ನಾನು ಹಿರಿಯ ನಾಯಕರು. ಮತ್ತೊಂದು ಟೀಮ್ ನಲ್ಲಿ ಡಿಕೆ ಶಿವಕುಮಾರ್ ಇರುತ್ತಾರೆ. ನಾನು ಹೈದರಾಬಾದ್ ಕರ್ನಾಟಕ ಪ್ರವಾಸದ ನಂತರ 2ನೇ ಕ್ಯಾಂಪೇನ್ ನಲ್ಲಿ ಹಳೇ ಮೈಸೂರು ಭಾಗದಲ್ಲಿ ಪ್ರವಾಸ ಮಾಡುತ್ತೇನೆ. ಆಗ ಡಿಕೆ ಶಿವಕುಮಾರ್ ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಾರೆ. ಜಿಲ್ಲಾ ಕೇಂದ್ರಗಳಿಗೆ ಜಂಟಿಯಾಗಿ ಪ್ರವಾಸ ಮಾಡುತ್ತೇವೆ ಎಂದು ತಿಳಿಸಿದರು.
ತಮ್ಮ ಸ್ಪರ್ಧೆ ಕುರಿತು ಸ್ಪಷ್ಟನೆ ನೀಡಿದ ಸಿದ್ಧರಾಮಯ್ಯ, ಹೈಕಮಾಂಡ್ ಹೇಳಿದ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ. ಬಾದಾಮಿ, ವರುಣ ಕ್ಷೇತ್ರಗಳಲ್ಲೂ ಸ್ಪರ್ಧೆಗೆ ಒತ್ತಾಯ ಮಾಡಿದ್ದಾರೆ. ಅಂತಿಮವಾಗಿ ಹೈಕಮಾಂಡ್ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧಿಸುವೆ ಎಂದರು.
ರಾಜಕ್ಕೀಯಕ್ಕಾಗಿ ಗಡಿ ವಿವಾದ ಹುಟ್ಟು ಹಾಕುತ್ತಿದ್ದಾರೆ. ಕೇಂದ್ರ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವಿದೆ. ಬಿಜೆಪಿಯವರು ಯಾಕೆ ಗಡಿ ವಿವಾದ ಸರಿಪಡಿಸಬಾರದು. ಬೊಮ್ಮಾಯಿ ರಾಜ್ಯದಲ್ಲಿ ವೀಕ್ ಮುಖ್ಯಮಂತ್ರಿಯಾಗಿದ್ದಾರೆ,. ಇವರ ಸರ್ಕಾರಗಳಿದ್ದರೂ ಗಡಿ ವಿವಾದ ಸರಿಪಡಿಸುತ್ತಿಲ್ಲ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.
Key words: Compet- Constituency- High Command- Former CM -Siddaramaiah