ಬೆಂಗಳೂರು,ಜು,9,2019(www.justkannada.in): ಶಾಸಕಾಂಗ ಪಕ್ಷದ ನಿರ್ಣಯದಂತೆ ಅತೃಪ್ತ ಶಾಸಕರ ವಿರುದ್ಧ ಸ್ಪೀಕರ್ ಗೆ ದೂರು ನೀಡಲಾಗಿದೆ. ಬ್ಲಾಕ್ ಮೇಲ್ ಮಾಡುವ, ಜನರ ತೀರ್ಪಿಗೆ ವಿರುದ್ಧ ಇರುವವರಿಗೆ ತಕ್ಕ ಕ್ರಮ ಆಗ್ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.
ಸ್ಪೀಕರ್ ರಮೇಶ್ ಕುಮಾರ್ ಅವರನ್ನ ಭೇಟಿ ಮಾಡಿದ ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ಶಾಸಕಾಂಗ, ಮುಂಬೈಗೆ ಹೋಗಿ ಬಿಜೆಪಿ ಜೊತೆ ಕೈ ಜೋಡಿಸಿರುವ ಶಾಸಕರ ವಿರುದ್ಧ ದೂರು ನೀಡಲಾಗಿದೆ. ಮುಂದಿನ ಕ್ರಮವನ್ನ ಸಭಾಧ್ಯಕ್ಷರು ತೆಗೆದುಕೊಳ್ಳುತ್ತಾರೆ. ಪಕ್ಷಾಂತರ ಕಾಯ್ದೆ ಎಲ್ಲರಿಗೂ ಅನ್ವಯ ಆಗಲಿದೆ. ಪ್ರಜಾಪ್ರಭುತ್ವ ಉಳಿಸುವ ಕೆಲಸ ಆಗಬೇಕಿದೆ. ಹೀಗಾಗಿ ಅನರ್ಹ ಪ್ರಕ್ರಿಯೆ ಆರಂಭ ಆಗಿದೆ. ಈಗಲಾದರೂ ಕೂಡ ಅರ್ಥ ಮಾಡ್ಕೊಂಡು ಮುಂದೆ ಬರ್ಬೇಕು ಎಂದು ಸಲಹೆ ನೀಡಿದರು.
ಮಾಜಿ ಸಚಿವ ರಾಮಲಿಂಗರೆಡ್ಡಿ ಅವರ ವಿರುದ್ಧ ಕ್ರಮ ಇಲ್ಲ. ಪಕ್ಷದ ವಿರುದ್ಧವಾಗಿ ರಾಮಲಿಂಗ ರೆಡ್ಡಿ ನಡೆದಿಲ್ಲ. ಅವರೊಂದಿಗೆ ಮಾತುಕತೆ ನಡೆಸಲಾಗುತ್ತದೆ. ಇಂದು ನಡೆದ ಶಾಸಕಾಂಗ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಇನ್ನು ಆನಂದ್ ಸಿಂಗ್ ಹಾಗೂ ರೋಷನ್ ಬೇಗ್ ವಿರುದ್ಧವೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
Key words: Complaint- against -dissatisfied legislators -decided – Dinesh Gundurao.