ಪ್ರಭಾವಿಗಳ ಭೂ ಅಕ್ರಮ ಸಮಗ್ರ ತನಿಖೆ ನಡೆಸಿ: ರೋಹಿಣಿ ಸಿಂಧೂರಿ

ಮೈಸೂರು: ಜಿಲ್ಲಾಧಿಕಾರಿ ಅಧಿಕೃತ ವಸತಿ ನಿಲಯದಲ್ಲಿ ಸ್ವಿಮ್ಮಿಂಗ್ ಫುಲ್ ನಿರ್ಮಾಣ ಸಂಬಂಧಪಟ್ಟಂತೆ ಪ್ರಾದೇಶಿಕ ಆಯುಕ್ತರು ಸರಕಾರಕ್ಕೆ ಸಲ್ಲಿಸಿರುವ ವರದಿಗೆ ಸ್ವಾಗತಿಸಿರುವ ಈ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಭೂ ಅಕ್ರಮಗಳ ಸಮಗ್ರ ತನಿಖೆಗೂ ಒತ್ತಾಯಿಸಿದ್ದಾರೆ.

ಈ ಸಂಬಂಧ ಜೂನ್ 11ರಂದೇ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದ ರೋಹಿಣಿ ಸಿಂಧೂರಿ ಆ ಪತ್ರವನ್ನು ಇಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಡಿಸಿ ವಸತಿ ಗೃಹದಲ್ಲಿ ಸ್ವಿಮ್ಮಿಂಗ್ ಫೂಲ್ ನಿರ್ಮಾಣ ಕುರಿತ ತಾಂತ್ರಿಕ ದೋಷ ಗಳ ಕುರಿತು ಸವಿಸ್ತಾರ ವರದಿ ನೀಡಿರುವುದು ಸ್ವಾಗತಾರ್ಹ ವಿಚಾರ ಎಂದಿದ್ದಾರೆ.

ಜತೆಗೆ ಜಿಲ್ಲೆಯ ಪ್ರಬಲ ರಾಜಕಾರಣಿಗಳಿಂದ ನಡೆದಿರುವ ಭೂ ಅಕ್ರಮಗಳ ಕುರಿತಂತೆಯೂ ಸಮಗ್ರ ತನಿಖೆ ನಡೆಸಬೇಕು. ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಿ, ವಿಚಾರಣೆ ಕೈಗೊಂಡು ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ. ಕೇವಲ ಒಂದು ಅಂಶ ಇಟ್ಟುಕೊಂಡು ತನಿಖೆ ನಡೆಸಲಾಗಿದೆ. ಇದರ ಬದಲು ಭೂ ಅಕ್ರಮ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಕೋವಿಡ್ ಫಂಡ್ ದುರಪಯೋಗವಿಲ್ಲ

ಸ್ವಿಮ್ಮಿಂಗ್  ಫುಲ್ ನಿರ್ಮಾಣ ಕಾರ್ಯವನ್ನು ಡಿಸೆಂಬರ್ ನಲ್ಲಿಯೇ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕೋವಿಡ್ 2ನೇ ಅಲೆ ಇರಲಿಲ್ಲ. ಕೋವಿಡ್ ಪರಿಹಾರ ನಿಧಿಗೆ ನೀಡಿದ್ದ ಯಾವುದೇ ಅನುದಾನವನ್ನು ದುರುಪಯೋಗ ಮಾಡಿಲ್ಲ ಎಂದು ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದ್ದಾರೆ.

 

English Summary:  The detailed enquiry trying to cover widest breadth of even technical issues is welcome. I wish the same detail and comprehensiveness was shown in enquiry into irregularities on land by powerful politicians. Enquiry on land irregularities was restricted to single point at behest of persons accused of land irregularities despite clear cut list of multiple land irregularities cited by me as DC Mysuru.

1. Work not done during covid, it’s said in the Report work was taken up in December when there was no covid and no sign of a second wave

2. No misuse of any covid funds whatsoever.