ರಾಯಚೂರು,ಜೂ,26,2019(www.justkannada.in): ಮೈತ್ರಿ ಸರ್ಕಾರ ಕೇವಲ ಹಾಸನ ಮಂಡ್ಯ ರಾಮನಗರಕ್ಕೆ ಸೀಮಿತವಾಗಿದೆ ಎಂದು ಟೀಕಿಸುತ್ತಿದ್ದಾರೆ. ಆದರೆ ನಾನು ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳ ಮುಖ್ಯಮಂತ್ರಿ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದರು.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರೆಗುಡ್ಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ರಾಯಚೂರು ಜಿಲ್ಲೆಯ ರೈತರ 272 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಲಾಗಿದೆ. ಆಂಧ್ರದಲ್ಲಿ 5 ವರ್ಷವಾದರೂ ಸಾಲ ಮನ್ನಾವಾಗಿಲ್ಲ. ಆದ್ರೇ ನಮ್ಮ ಸರ್ಕಾರ ಬಂದ ಒಂದೇ ವರ್ಷದಲ್ಲಿ ಮನ್ನಾ ಮಾಡಲಾಗಿದೆ. ಎಂದು ಹೇಳಿದರು.
ಇನ್ನು ರಾಯಚೂರು ಜಿಲ್ಲೆಗೆ ಸಮಗ್ರ ನೀರಾವರಿ ಯೋಜನೆ ಜಾರಿಗೆ ತರಲಾಗುತ್ತದೆ. ನೀರಾವರಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ. . ಉತ್ತರ ಕರ್ನಾಟಕದ ಕೆರೆ-ಕಟ್ಟೆಗಳನ್ನು ತುಂಬಿಸುತ್ತೇವೆ. ಜಿಲ್ಲೆಯ ರಸ್ತೆಯ ಅಭಿವೃದ್ಧಿದಾದಿ ರೂ.344 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಭರವಸೆ ನೀಡಿದರು.
ಇದೇ ವೇಳೆ ಸಿಎಂ ಗ್ರಾಮವಾಸ್ತವ್ಯದ ವಿರುದ್ದ ಪಾದಯಾತ್ರೆ ಮಾಡುತ್ತಿರುವ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದ ಸಿಎಂ ಹೆಚ್.ಡಿಕೆ, ಪಕ್ಕದ ಶಾಸಕರೊಬ್ಬರು ಪಾದಯಾತ್ರೆ ಮಾಡುತ್ತಿದ್ದಾರೆ. ಅವರು 2009ರಲ್ಲಿ ಮಂತ್ರಿಗಳಾಗಿದ್ದರು. ಗೂಗಲ್ ಗ್ರಾಮಕ್ಕೆ ರಸ್ತೆ ಮಾಡಿಸಿಕೊಡಲು ಆಗಲಿಲ್ಲ. ಈಗ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
Key words: Comprehensive- Irrigation -Project – Raichur District-CMHD kumaraswamy