ಮೈಸೂರು,ಜು,6,2020(www.justkannada.in): ಕೊರೋನಾ ಪ್ರಕರಣ ಹೆಚ್ಚಳ ಮತ್ತು ಅನ್ ಲಾಕ್ 2.0 ಪ್ರಕಾರ ಅಂತರಾಜ್ಯ ಮುಕ್ತ ಓಡಾಟಕ್ಕೆ ಅವಕಾಶ ಹಿನ್ನೆಲೆ ಸರ್ಕಾರ ಮತ್ತೆ ಕ್ವಾರಂಟೈನ್ ನಿಯಮ ಬದಲಾವಣೆ ಮಾಡಿದೆ.
ಅಂತರಾಜ್ಯ ಪ್ರಯಾಣಿಕರು ಇನ್ಮುಂದೇ 14ದಿನಗಳು ಕಡ್ಡಾಯ ಹೋಂ ಕ್ವಾರಂಟೈನ್ ನಲ್ಲಿರಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅನ್ ಲಾಕ್ 2.0 ಪ್ರಕಾರ ಅಂತರಾಜ್ಯ ಮುಕ್ತ ಓಡಾಟಕ್ಕೆ ಅವಕಾಶ ನೀಡಲಾಗಿದ್ದು, ಕ್ವಾರಂಟೈನ್ ನಿಯಮಾವಳಿಯಲ್ಲಿ ಸಡಿಲಿಕೆ ಮಾಡಲಾಗಿದೆ.
ಹೀಗಾಗಿ ರಾಜ್ಯ ಸರ್ಕಾರ ಕಡ್ಡಾಯ ಹೋಂ ಕ್ವಾರಂಟೈನ್ ಗೆ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು ಕೊರೊನಾ ಹಾಟ್ ಸ್ಪಾಟ್ ಮಹಾರಾಷ್ಟ್ರ ಸೇರಿದಂತೆ ಯಾವುದೇ ರಾಜ್ಯದಿಂದ ಕರುನಾಡಿಗೆ ಆಗಮಿಸುವವರಿಗೆ ಹೋಂ ಕ್ವಾರಂಟೈನ್ ಕಡ್ಡಾಯವಾಗಿದೆ.
ಕಡ್ಡಾಯ ಹೋಂ ಕ್ವಾರಂಟೈನ್ ಸರ್ಕಾರದ ಆದೇಶ ಹಿನ್ನೆಲೆ, ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಸೂಚನೆ ನೀಡಿದ್ದಾರೆ.
Key words: compulsory-home quarantine -any state-govrnament-mysore- dc- abhiram ji shankar