ಉಡುಪಿ,ನವೆಂಬರ್,26,2022(www.justkannada.in): ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಧೋರಣೆ ಖಂಡಿಸುತ್ತೇವೆ. ಭಾಷೆ, ನೆಲೆ ಜಲದ ವಿಚಾರದಲ್ಲಿ ಯಾವುದೇ ಪ್ರಚೋದನೆ ಸಹಿಸಲ್ಲ ಎಂದು ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು.
ಉಡುಪಿಯಲ್ಲಿ ಇಂದು ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಇತ್ಯರ್ಥ ಆಗಿರುವ ಗಡಿ ವಿಚಾರವನ್ನ ಮತ್ತೆ ಮತ್ತೆ ಕೆದಕಬೇಡಿ. ಜನರ ಭಾವನೆ ಕೆರಳಿಸುವುದು ಖಂಡನೀಯ. ನಾವು ಜೊತೆಯಾಗಿ ಬದುಕಬೇಕು. ಪ್ರಚೋದನೆಗೆ ಒಳಗಾಗಬಾರದು ನಾವೆಲ್ಲರೂ ಭಾರತೀಯರು ಅನ್ನುವ ಭಾವನೆಯಿಂದ ಬದುಕೋಣ ಎಂದರು.
ಮಹಾರಾಷ್ಟ್ರ ರಾಜ್ಯದಲ್ಲಿ ಬಿಜೆಪಿ ಶಿವಸೇನೆ ಮೈತ್ರಿ ಸರ್ಕಾರವಿದೆ. ಶಿವಸೇನೆ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ರಾಜಕೀಯ ಹೇಳಿಕೆ ನೀಡುತ್ತಿದೆ. ಭಾರತೀಯತೆ ಎನ್ನುವುದು ಇವೆಲ್ಲವನ್ನೂ ಮೀರಿದೆ. ಭಾಷೆ ನೆಲೆ ಜಲದ ವಿಚಾರದಲ್ಲಿ ಯಾವುದೇ ಪ್ರಚೋದನೆ ಸಹಿಸಲ್ಲ ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು.
Key words: Condemnation – Maharashtra- attitude – border issue- Minister- Ashwath Narayan