ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಖಂಡನೆ: ಮೈಸೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಪ್ರತಿಭಟನೆ 

ಮೈಸೂರು,ಡಿಸೆಂಬರ್,05,2020(www.justkannada.in) : ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮತ್ತು ಶಾಸಕರುಗಳ ಕನ್ನಡ ದ್ರೋಹಿ ನಡವಳಿಕೆಗಳನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಮೈಸೂರು ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.logo-justkannada-mysoreಜಿಲ್ಲಾಧಿಕಾರಿ ಕಚೇರಿ ಬಳಿ ಶನಿವಾರ ಜಮಾವಣೆಗೊಂಡ ಪ್ರತಿಭಟನಕಾರರು ಸರಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.

ಈ ಸಂದರ್ಭ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ, ಬೆಳಗಾವಿ, ಬಸವಕಲ್ಯಾಣ, ಮಸ್ಕಿ ಉಪಚುನಾವಣೆಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದಿಢೀರನೆ ಮರಾಠ ಅಭಿವೃದ್ಧಿ ಪ್ರಾಧಿಕಾರ ವನ್ನು ರಚಿಸುವ ಘೋಷಣೆ ಮಾಡಿತು. ಈ ಪ್ರಾಧಿಕಾರ ರಚನೆಗೆ ಪೂರಕವಾಗಿ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಶಿಫಾರಸ್ಸಾಗಲಿ, ವುದೇ ರೀತಿಯ ವೈಜ್ಞಾನಿಕ ಅಧ್ಯಯನ, ಕುಲಶಾಸ್ತ್ರೀಯ ಸಂಶೋಧನೆಗಳ ಆಧಾರವೂ ಇಲ್ಲ ಎಂದು ಕಿಡಿಕಾರಿದರು.

ಇದು ರಾಜಕೀಯ ತಂತ್ರಗಾರಿಕೆಯಾಗಿದ್ದು, ಒಂದು ಭಾಷಿಕ ಸಮುದಾಯವನ್ನು ಅನೈತಿಕವಾಗಿ ,ಅಸಾಂವಿಧಾನಿಕವಾಗಿ ಓಲೈಸುವ ತಂತ್ರವಾಗಿದೆ.  ಕರ್ನಾಟಕದ ಗಡಿಭಾಗಗಳಲ್ಲಿ ಎಂಇಎಸ್, ಶಿವಸೇನೆ, ಎನ್ ಸಿಪಿ ಇತ್ಯಾದಿ ಸಂಘಟನೆ ರಾಜಕೀಯ ಪಕ್ಷಗಳು ಕನ್ನಡಿಗರು ಮತ್ತು ಮರಾಠಿಗರ ನಡುವೆ ವೈಷಮ್ಯ ಹುಟ್ಟಿಸುವ ಪ್ರಯತ್ನಗಳನ್ನು ದಶಕಗಳಿಂದ ನಡೆಸುತ್ತ ಬಂದಿದೆ. ಇಂಥ ಸಂದರ್ಭದಲ್ಲಿ ಪ್ರಾಧಿಕಾರದ ರಚನೆ ಅಗತ್ಯವಿತ್ತೆ ಎಂದು ಆಕ್ರೋಶವ್ಯಕ್ತಪಡಿಸಿದರು.

Condemn,formation,Maratha,Development,Authority,Karnataka,Defense,Forum,District,Unit,Protest

ಪ್ರತಿಭಟನೆಯಲ್ಲಿ ಸಂಘಟನೆಯ ಅನೇಕರು ಭಾಗವಹಿಸಿದ್ದರು.

key words : Condemn-formation-Maratha-Development-Authority-Karnataka-Defense-Forum-District-Unit-Protest