ಮೈಸೂರು,ಸೆ,6,2019(www.justkannada.in): ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ಅಖಿಲ ಭಾರತ ಮುಕ್ತ ವಿವಿ ಕುಲಪತಿಗಳ ಸಮ್ಮೇಳನ ಆಯೋಜಿಸಲಾಗಿತ್ತು.
ಕೆಎಸ್ ಒಯು ಮೈಸೂರು ಆಶ್ರಯದಲ್ಲಿ ಕೆಎಸ್ ಒಯು ಘಟಿಕೋತ್ಸವದಲ್ಲಿ 21 ನೇ ಶತಮಾನದ ಶತಮಾನದಲ್ಲಿ ಮುಕ್ತವಿವಿಗಳ ಪಾತ್ರ ಕುರಿತು ಸಮ್ಮೇಳನ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ ಮುಕ್ತವಿವಿ ಕುಲಪತಿಗಳು ಭಾಗಿಯಾಗಿದ್ದರು. ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಎಂಎಲ್ ಸಿ ಸಂದೇಶ್ ನಾಗರಾಜು, ನವದೆಹಲಿ ಯುನಿವರ್ಸಿಟಿ ಗ್ರ್ಯಾಂಟ್ ಕಮಿಷನ್ ಜಂಟಿಕಾರ್ಯದರ್ಶಿ ಅವಿಚಾಲ್ ಕಪೂರ್, ಕೆಎಸ್ ಒಯು ಕುಲಪತಿ ವಿದ್ಯಾಶಂಕರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮ ಉದ್ಘಾಟನೆ ಬಳಿಕ ಮಾತನಾಡಿದ ಮುಕ್ತ ವಿವಿ ಕುಲಪತಿ ವಿದ್ಯಾಶಂಕರ್, ಭಾರತದಲ್ಲು ಉನ್ನತ ಶಿಕ್ಷಣ ಅಡ್ಡ ಹಾದಿಯಲ್ಲಿದೆ. ಹೆಚ್ಚಿನ ಮತ್ತು ಗುಣಮಟ್ಟಡ ಶಿಕ್ಷಣದ ಮೇಲೆ ನಿರಿಕ್ಷೆಗಳು ಹೆಚ್ಚಾಗಿವೆ. ಇದರಿಂದ ಪರಿಣಾಮಕಾರಿ ಶಿಕ್ಷಣದಲ್ಲಿ ಒತ್ತಡಕ್ಕೆ ಒಳಪಡಿಸಿವೆ. ನಾವು ಜ್ಣಾನ ಯುಗದಲ್ಲಿ ಇದ್ದೇವೆ. ಜ್ಞಾನ ಸಮಾಜದತ್ತ ವೇಗವಾಗಿ ಮುನ್ನಡೆಯುತ್ತಿದ್ದೇವೆ. ತಗ್ಗುತ್ತಿರೊ ಸಂವಹನಮತ್ತು ಮಾಹಿತಿ ತಂತ್ರಜ್ಞಾನ ,ಜಾಗತಿಕ ರಾಷ್ಟ್ರೀಯ ಆರ್ಥಿಕ ಏರಿಳಿತಗಳಿಂದ ,ಕುಗ್ಗುತ್ತಿರೊ ಸಂಪನ್ಮೂಲಗಳಿಂದ ಹೊಸ ಆಲೋಚನೆಗೆ ದಾರಿ ಮಾಡಿಕೊಟ್ಟಿವೆ. ಮುಕ್ತ ಮತ್ತು ದೂರ ಶಿಕ್ಷಣ ಒಂದು ರೋಮಾಂಚನಕಾರಿಯಾದಂತಹ ಪರ್ಯಾಯ ಮಾರ್ಗವಾಗಿದೆ ಎಂದು ತಿಳಿಸಿದರು.
Key words: Conference – Role -21st Century – KSOU-mysore- Chancellors