ಮೈಸೂರು,ಫೆಬ್ರವರಿ,16,2021(www.justkannada.in): ಕಾಶಪ್ಪನವರ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ನಡುವೆ ವಾಕ್ಸಮರ ನಡೆಯುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಎಸ್.ಎ ರಾಮದಾಸ್, ಇದರಿಂದ ಪಕ್ಷಕ್ಕೆ ಮುಜುಗರ ಆಗುವುದು ಸಹಜ. ಇದು ಪಕ್ಷ ಮತ್ತು ಅವರಿಗೆ ಬಿಟ್ಟ ವಿಚಾರ ಎಂದಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ಎಸ್.ಎ ರಾಮದಾಸ್, ಮೂವರ ನಡುವಿನ ವಾಕ್ಸಮರ, ಇದು ಪಕ್ಷ ಮತ್ತು ಅವರಿಗೆ ಬಿಟ್ಟ ವಿಚಾರ. ಆದ್ರೆ ಸಹಜವಾಗಿ ಮುಜುಗರ ಆಗ್ತಾ ಇದೆ. ಪಕ್ಷದ ಹಿರಿಯರು ಇದನ್ನ ನೋಡಿಕೊಳ್ತಾರೆ. ನಾನು ಸಂಘ ಪರಿವಾರದವನಾಗಿದ್ರಿಂದಲೇ ಇಂದಿಗೂ ಸಂತೋಷವಾಗಿದ್ದೇನೆ ಎಂದರು.
ಮೂಲ ಬಿಜೆಪಿಗರಿಗೆ ಮಂತ್ರಿ ಸ್ಥಾನ ಕೈ ತಪ್ಪಿದ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್.ಎ ರಾಮದಾಸ್, ನನ್ನ ಲಕ್ಷ್ಮಣ ರೇಖೆಯಲ್ಲಿ ಖುಷಿಯಾಗಿ ಕೆಲಸ ಮಾಡ್ತಿದ್ದೇನೆ. ಮಂತ್ರಿ ಸ್ಥಾನ ನೀಡೋದು ಬಿಡೋದು ಮನೆಯ ಯಜಮಾನರಿಗೆ ಸೇರಿದ ವಿಚಾರ ಎಂದು ತಿಳಿಸಿದರು.
ಮೈತ್ರಿ ಸುಳಿವು ಬಿಟ್ಟು ಕೊಡದ ಶಾಸಕ ರಾಮದಾಸ್…
ಮೈಸೂರು ಮೇಯರ್- ಉಪಮೇಯರ್ ಚುನಾವಣೆ ವಿಚಾರ ಕುರಿತು ಮೈತ್ರಿ ಸುಳಿವು ಬಿಟ್ಟು ಕೊಡದ ಶಾಸಕ ರಾಮದಾಸ್. ಅಂತಿಮ ಕ್ಷಣದ ವರೆಗು ಏನು ಹೇಳಲು ಆಗುವುದಿಲ್ಲ. ಬೆಳಗ್ಗೆ ಇದ್ದವರು, ರಾತ್ರಿ ಬದಲಾವಣೆ ಆಗೋ ಸಾಧ್ಯತೆ ಇರುತ್ತೆ. ಹಾಗಾಗಿ ಕೊನೆ ಕ್ಷಣದ ವರೆಗು ಏನು ಹೇಳಲು ಸಾಧ್ಯವಿಲ್ಲ ಎಂದರು.
Key words: conflict -between –three-embarrassed – party-MLA-S.A. Ramdas.