ಪರಿವಾರ ಮತ್ತು ತಳವಾರ ಸಮುದಾಯ ಕುರಿತು ಡಿಸಿಎಂ ಗೋವಿಂದ ಕಾರಜೋಳ ಆಡಿರುವ ಮಾತಿನಿಂದ ಗೊಂದಲ ಸೃಷ್ಟಿ- ದೇವರಾಜ್ ಟಿ. ಕಾಟೂರು…

ಮೈಸೂರು,ಜೂ,3,2020(www.justkannada.in): ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಅಂಬಿಗರೆಲ್ಲಾ ತಳವಾರ ಎಂದು ಬರೆಸಿ ಎಸ್ಟಿ ಜಾತಿ ಪ್ರಮಾಣ ಪತ್ರ ಪಡೆಯಿರಿ ಎಂದು ಹೇಳಿದ್ದರು. ಈ ಹೇಳಿಕೆಯನ್ನು ನಾವು ತೀವ್ರತರವಾಗಿ ಖಂಡಿಸುತ್ತೇವೆ ಎಂದು ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ವೇದಿಕೆ ಅಧ್ಯಕ್ಷ ದೇವರಾಜ್ ಟಿ. ಕಾಟೂರು ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟಪಡಿಸಿದ ವೇದಿಕೆ ಅಧ್ಯಕ್ಷ ದೇವರಾಜ್ ಟಿ. ಕಾಟೂರು, ಪರಿವಾರ ಮತ್ತು ತಳವಾರ ನಾಯಕ ಸಮಾಜದ ಪರ್ಯಾಯ ಪದವೇ ಹೊರತು ಅಂಬಿಗರ ಸಮಾಜದ ಪರ್ಯಾಯ ಪದವಲ್ಲ ಎಂದು ಸ್ಪಷ್ಟನೆ ನೀಡಿದರು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಅಂಬಿಗರೆಲ್ಲಾ ತಳವಾರ ಎಂದು ಬರೆಸಿ ಎಸ್ಟಿ ಜಾತಿ ಪ್ರಮಾಣ ಪತ್ರ ಪಡೆಯಿರಿ ಎಂದು ಹೇಳಿದ್ದರು.confusion - DCM -Govinda Karajola- talk – talavara -community.

ಈ ಹೇಳಿಕೆಯನ್ನು ನಾವು ತೀವ್ರತರವಾಗಿ ಖಂಡಿಸುತ್ತೇವೆ. ಗೋವಿಂದ ಕಾರಜೋಳ ಅವರು ಪರಿವಾರ ಮತ್ತು ತಳವಾರ ಸಮುದಾಯದ ಕುರಿತು ಆಡಿರುವ ಮಾತು ಗೊಂದಲ ಸೃಷ್ಟಿಸುತ್ತಿದೆ ಇದು ಜ್ಞಾನದ ಕೊರತೆಯೋ ಅಥವಾ ರಾಜಕೀಯ ದುರುದ್ದೇಶವೋ ತಿಳಿಯುತ್ತಿಲ್ಲ. ಹಿಂದೆ ಸಿದ್ದರಾಮಯ್ಯನವರು ಸಹ ಕುರುಬ ಸಮಾಜದವರು ಸಹ ಗೊಂಡ, ರಾಜಗೊಂಡ ಎಂದು ಬರೆಸಿ ಎಸ್ಟಿ ಜಾತಿ ಪ್ರಮಾಣ ಪತ್ರ ಪಡೆಯಿರಿ ಎಂದು ಬಹಿರಂಗವಾಗಿ ಕರೆ ನೀಡಿದ್ದರು. ಇದು ಎಸ್ಟಿ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿ ಸ್ವತಃ ಸಿದ್ದರಾಮಯ್ಯನವರೇ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಳ್ಳುವಂತಾಯಿತು. ಆದ್ದರಿಂದ ಕೇಂದ್ರ ಸರ್ಕಾರದ ಗೆಜೆಟ್ ನೋಟಿಫಿಕೇಶನ್ ಅಡಿಯಲ್ಲಿ ಜಾತಿ ಪ್ರಮಾಣ ಪತ್ರ ನೀಡುವಂತೆ ಸೂಚಿಸಬೇಕೇ ವಿನಃ ಇತರ ಜಾತಿಯಲ್ಲಿ ಇರುವವರಿಗೆ ಸೂಚಿಸಬಾರದು. ಹಾಗಾಗಿ ನಿಜವಾದ ನಾಯಕ, ಪರಿವಾರ ಮತ್ತು ತಳವಾರ ಸಮುದಾಯಕ್ಕೆ ಅನ್ಯಾಯ ಮಾಡದಂತೆ ನ್ಯಾಯ ಒದಗಿಸಬೇಕು ಎಂದು ದೇವರಾಜ್ ಟಿ. ಕಾಟೂರು ತಿಳಿಸಿದರು.

Key words:  confusion – DCM -Govinda Karajola- talk – talavara -community.