ಕಾಂಗ್ರೆಸ್ ನವರು ಜೀವಂತವಾಗಿದ್ದೇವೆ ಎಂದು ತೋರಿಸೋದಕ್ಕೆ ಸಮಾವೇಶ : ಸಚಿವ ಕೆ.ಎಸ್.ಈಶ್ವರಪ್ಪ ಟೀಕೆ

ಬೆಂಗಳೂರು,ಮಾರ್ಚ್,13,2021(www.justkannada.in) : ಸಮಾವೇಶಕ್ಕೆ ಬರುವ ದೊಡ್ಡ ದೊಡ್ಡ ನಾಯಕರ ಪಟ್ಟಿಯನ್ನು ನಾನು ನೋಡಿದ್ದೇನೆ. ಮಲ್ಲಿಕಾರ್ಜುನ ಖರ್ಗೆ, ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಬರ್ತಿದ್ದಾರೆ. ಕಾಂಗ್ರೆಸ್ ನವರು ನಾವು ಜೀವಂತವಾಗಿದ್ದೇವೆ ಎಂದು ತೋರಿಸೋದಕ್ಕೆ ಸಮಾವೇಶ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.jk

ಭದ್ರಾವತಿಯಲ್ಲಿ ನಡೆದ ಕಬಡ್ಡಿ ಕೂಟದ ಗಲಾಟೆ ಸಂಬಂಧ ಶಾಸಕ ಸಂಗಮೇಶ್ ಪುತ್ರನನ್ನು ಬಂಧಿಸಿರುವ ಪ್ರಕರಣವನ್ನು ಖಂಡಿಸಿ ಶಿವಮೊಗ್ಗದಲ್ಲಿಂದು ಕಾಂಗ್ರೆಸ್ ನಿಂದ ನಡೆಯುತ್ತಿರುವ ಜನಾಕ್ರೋಶ ಪ್ರತಿಭಟನೆಯನ್ನು ವಿರುದ್ಧ ಕಿಡಿಕಾರಿದ್ದಾರೆ.

ಎಲ್ಲರೂ ಒಮ್ಮೆ ಭದ್ರಾವತಿಗೆ ಹೋಗಿ ನೋಡಿಕೊಂಡು ಬರಲಿ. ಘಟನೆಯಲ್ಲಿ ಯಾರ ತಪ್ಪೆಂದು ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ಕೇಳಲಿ. ಕ್ರೀಡೆಯಲ್ಲಿ ಗೆದ್ದ ತಂಡ ಭಾರತ್ ಮಾತಾಕೀ ಜೈ, ಜೈ ಶ್ರೀರಾಮ್ ಘೋಷಣೆ ಕೂಗಿ, ಸಂಭ್ರಮಿಸಿದ್ದಾರೆ. ಈ ತರಹ ಕೂಗಿದ್ದು ಶಾಸಕ ಸಂಗಮೇಶ್ ಹಾಗೂ ಅವರ ಮಕ್ಕಳಿಗೆ ಯಾಕೇ ಬೇಸರ ಆಗಿದೆಯೋ ಗೊತ್ತಿಲ್ಲ. ಪಾಕಿಸ್ತಾನ ಜಿಂದಾಬಾದ್, ಅಲ್ಲಾಹು ಅಕ್ಬರ್ ಎಂದು ಕೂಗಿದ್ದರೇ ಸಮಾಧಾನ ಆಗ್ತಿತ್ತೇನೋ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

Congress-alive-show-Conference-Minister-K.S.Eshwarappa 

ಈ ರೀತಿ ಕೂಗಿದ್ದಕ್ಕೆ ಹಲ್ಲೆ ಮಾಡಿದ್ದು ಸರಿಯೇ ಎಂದು ಹೋಗಿ ಮೊದಲು ಕೇಳಿಕೊಂಡು ಬರಲಿ. ಕ್ರೀಡೆಯಲ್ಲಿ ಗೆದ್ದವರು ಸಂಭ್ರಮಾಚರಣೆ ಮಾಡುವುದು ಸಾಮಾನ್ಯ. ಸೋತಾಗ ಸೋಲನ್ನು ಒಪ್ಪಿಕೊಳ್ಳಬೇಕು. ಇಲ್ಲಿ ಜನಾಕ್ರೋಶ ಸಮಾವೇಶ ಮಾಡುತ್ತಿರವುದಕ್ಕೆ ಅರ್ಥವಿಲ್ಲ. ಹೀಗೆ ಮುಂದುವರೆಸಿಕೊಂಡು ಹೋಗ್ಬೇಡಿ ಎಂದು ಹೇಳಿದ್ದಾರೆ.

key words : Congress-alive-show-Conference-Minister-K.S.Eshwarappa