ವ್ಯಾಕ್ಸಿನ್ ಹಂಚಿಕೆಯಲ್ಲಿ ಬಿಜೆಪಿ ರಾಜಕೀಯ ಎಂಬ ಕಾಂಗ್ರೆಸ್ ಆರೋಪ: ಸಚಿವ ಜಗದೀಶ್ ಶೆಟ್ಟರ್ ತಿರುಗೇಟು….

ಮೈಸೂರು,ಜನವರಿ,7,2021(www.justkannada.in):  ವ್ಯಾಕ್ಸಿನ್ ಹಂಚಿಕೆಯಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್  ತಿರುಗೇಟು ನೀಡಿದ್ದಾರೆ.jk-logo-justkannada-mysore

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಕಾಂಗ್ರೆಸ್ ರಚನಾತ್ಮಕ ಕೆಲಸಗಳಿಗೆ ಕೈಜೋಡಿಸಬೇಕು‌. ವಿರೋಧ ಪಕ್ಷಗಳು ಕೇವಲ ವಿರೋಧ ಮಾಡಬಾರದು. ರಚನಾತ್ಮಕ‌ ಕೆಲಸ ಕಾರ್ಯಗಳಿಹೆ ಸಲಹೆ ಸೂಚನೆ ಕೊಡಬೇಕು. ರಾಹುಲ್‌ ಗಾಂಧಿ ಇಷ್ಟೆಲ್ಲಾ‌ ಆರೋಪ ಮಾಡ್ತಾರಲ್ಲ ಅವರ ಸ್ಥಿತಿ ಹೇಗಿದೆ ಅಂತ ಜನತೆಗೆ ಗೊತ್ತಿದೆ. ಇಡೀ ಜಗತ್ತಿನಲ್ಲೇ‌ ಪ್ರಧಾನಿ ಮೋದಿ ನಂಬರ್‌ ಒನ್ ಜನಪ್ರಿಯತೆಯಲ್ಲಿದ್ದಾರೆ ಎಂದು ಟಾಂಗ್ ನೀಡಿದರು.

ಕೋವಿಡ್ ಲಾಕ್ ಡೌನ್  ನಂತರ ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿ….

ಕೋವಿಡ್ ಲಾಕ್ ಡೌನ್  ನಂತರ ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ಲಾಕ್ ಡೌನ್ ನಂತರ ನಿರೀಕ್ಷೆ ಮೀರಿ ಕೈಗಾರಿಕೆಗಳು ಅಭಿವೃದ್ಧಿ ಹೊಂದುತ್ತಿವೆ. ದೇಶದಲ್ಲಿ ಮೂರುವರೆ ಲಕ್ಷ ಕೋಟಿಯಷ್ಟು ಬಂಡವಾಳ ಹೂಡಿಕೆ ಮಾಡಲು ಕೈಗಾರಿಕೋದ್ಯಮಿಗಳು ಮುಂದಾಗಿದ್ದಾರೆ. ರಾಜ್ಯದಲ್ಲಿ 1.40 ಕೋಟಿ ಬಂಡವಾಳ ಹೂಡಲು ಕೈಗಾರಿಕೆಗಳು  ಮುಂದಾಗಿವೆ. ಕೈಗಾರಿಕೆಯ ಶೇ. 41 ರಷ್ಟು ಬಂಡವಾಳ ಹೂಡಿಕೆಗೆ ಮುಂದಾಗಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.Congress –alleges- BJP- politics – vaccine-   Minister -Jagadish Shetter -mysore

ಕೋವಿಡ್ ವೇಳೆಯಲ್ಲಿ ಅವರ ಗ್ರಾಮಗಳಿಗೆ ತೆರಳಿದ ನೌಕರರು ಪುನಃ ಹಿಂತಿರುಗಿ  ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಕ್ಷಾಂತರ ಜನ ಉದ್ಯೋಗಿಗಳು ರಾಜ್ಯಕ್ಕೆ ಆಗಮಿಸಿ ಕೌಶಲ್ಯಭಿವೃದ್ಧಿಗೆ ಹೆಚ್ಚು ಗಮನವಹಿಸಲಾಗುತ್ತಿದೆ. ಉದ್ಯೋಗ ಸೃಷ್ಟಿಸಲು ಕೊಪ್ಪಳದಲ್ಲಿ ಟಾಯ್ಸ್ ಕ್ಲಸ್ಟರ್ ಮುಖಾಂತರ 350 ರಿಂದ 450 ಎಕರೆ ಪ್ರದೇಶದಲ್ಲಿ ವಿನೂತನ ಗೊಂಬೆಗಳ ತಯಾರಿಕೆಗೆ ಮುಂದಾಗಿದ್ದೇವೆ. ಇದರಿಂದ 20 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುತ್ತೇವೆ. ದೇಶದಲ್ಲಿ ಅತಿ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆದಾರರು ಆಗಮಿಸುತ್ತಿದ್ದಾರೆ. ಇದರಿಂದ ಮತ್ತಷ್ಟು ಹೆಚ್ಚಿನ ಉದ್ಯೋಗಗಳು ರಾಜ್ಯದ ನಿರುದ್ಯೋಗಿಗಳಿಗೆ ಸಿಗಲಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ಗಡಿಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡುತ್ತೇವೆ….

ಚಾಮರಾಜ ನಗರ ಜಿಲ್ಲೆ ಹಿಂದುಳಿದಿರುವ ಜಿಲ್ಲೆ. ಗಡಿಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡುತ್ತೇವೆ. ಇಲ್ಲಿಯೂ ಕೈಗಾರಿಕೋದ್ಯಮಕ್ಕೆ ಹೆಚ್ಚು ಒತ್ತು ನೀಡುವ ಹಿನ್ನೆಲೆ ಇಂದು ಭೇಟಿ ನೀಡುತ್ತಿದ್ದೇನೆ. ಕಳೆದ ಬಾರಿ ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ಚಾಮರಾಜನಗರಕ್ಕೂ ಭೇಟಿ ನೀಡಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಭೇಟಿ ನೀಡಲು ಸಾಧ್ಯವಾಗಲಿಲ್ಲ.ಈ ಹಿನ್ನಲೆ ಇಂದು ಭೇಟಿ ನೀಡುತ್ತಿದ್ದೇನೆ.  ಚಾಮರಾಜನಗರದಲ್ಲಿ ಕೈಗಾರಿಕೆಗಳ ಆರಂಭಿಸಲು ನೆರೆ ರಾಜ್ಯ ಕೇರಳದ ಉದ್ಯಮಿಗಳು ಅಗಮಿಸುತ್ತಿದ್ದಾರೆ. ಗಡಿಜಿಲ್ಲೆಯ ಕೈಗಾರಿಕೋದ್ಯಮ ರಾಜ್ಯದ ಕೈಗಾರಿಕೋದ್ಯಮ ಅಭಿವೃದ್ಧಿಗೆ ಪೂರಕವಾಗಿದೆ. ಇಂದು ಜಿಲ್ಲೆಯ ಅಧಿಕಾರಿಗಳು, ಉದ್ಯಮಿಗಳ ಜೊತೆ ಸಂವಾದ ನಡೆಸುತ್ತೇನೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ENGLISH SUMMARY….

Minister Jagadish Shettar reacts to Cong. allegations on BJP politics in distribution of Vaccine
Mysuru, Jan. 07, 2021 (www.justkannada.in): Large and Medium Industries Minister Jagadish Shettar has given his reaction to the allegations made by the Congress party on BJP politics in the distribution of vaccines.
Speaking to the presspersons in Mysuru today Minister Jagadish Shettar said, “everyone should join hands in such work. The opposition parties should not oppose everything. They should suggest in structural works. Rahul Gandhi makes so many allegations, but don’t people know what is his condition? Whereas Prime Minister Narendra Modi is the most popular in the entire world.”Minister Jagadish Shettar reacts to Cong. allegations on BJP politics in distribution of Vaccine Mysuru, Jan. 07, 2021 (www.justkannada.in): Large and Medium Industries Minister Jagadish Shettar has given his reaction to the allegations made by the Congress party on BJP politics in the distribution of vaccines. Speaking to the presspersons in Mysuru today Minister Jagadish Shettar said, "everyone should join hands in such work. The opposition parties should not oppose everything. They should suggest in structural works. Rahul Gandhi makes so many allegations, but don't people know what is his condition? Whereas Prime Minister Narendra Modi is the most popular in the entire world." "The State Government has been successful in creating the highest number of jobs after the lockdown by attracting huge investments in the industrial sector. We are also concentrating on developing Chamarajanagara District, which is considered one of the most backward Districts in the state. We have plans to encourage industries and attract investments in this District also," he said. Keywords: Jagadish Shettar/ Cong. allegations/ BJP politics/ Vaccine
“The State Government has been successful in creating the highest number of jobs after the lockdown by attracting huge investments in the industrial sector. We are also concentrating on developing Chamarajanagara District, which is considered one of the most backward Districts in the state. We have plans to encourage industries and attract investments in this District also,” he said.
Keywords: Jagadish Shettar/ Cong. allegations/ BJP politics/ Vaccine

Key words: Congress –alleges- BJP- politics – vaccine-   Minister -Jagadish Shetter -mysore