ಮೈಸೂರು,ಮೇ,31,2019(www.justkannada.in ಕಾಂಗ್ರೆಸ್ – ಜೆಡಿಎಸ್ ನವರ ಆಂತರಿಕ ಗೊಂದಲದಿಂದಲೇ ನಾವು ನಮ್ಮ ಸ್ಥಾನ ಹೆಚ್ಚಿಸಿಕೊಂಡಿದ್ದೇವೆ. ಹೀಗಾಗಿ ನಗರಸಭೆ ಗದ್ದುಗೆಯನ್ನ ನಾವೇ ಹಿಡಿಯುತ್ತೇವೆ ಎಂದು ನಂಜನಗೂಡು ಶಾಸಕ ಹರ್ಷವರ್ಧನ್ ವಿಶ್ವಾಸ ವ್ಯಕ್ತಪಡಿಸಿದರು.
ನಂಜನಗೂಡು ನಗರಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, 31 ಸ್ಥಾನಗಳ ಪೈಕಿ ಕಾಂಗ್ರೆಸ್ 10, ಬಿಜೆಪಿ – 15, ಜೆಡಿಎಸ್ 3, ಪಕ್ಷೇತರರು 3 ಸ್ಥಾನ ಪಡೆದಿದ್ದಾರೆ. ಬಿಜೆಪಿ ಅಧಿಕಾರ ಹಿಡಿಯಲು ಒಂದು ಸ್ಥಾನ ಮಾತ್ರ ಕೊರತೆ ಇದೆ. ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಹರ್ಷವರ್ಧನ್, ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಮೈಸೂರಿಗೆ ಬಂದ ನಂತರ ಪಕ್ಷೇತರ ಅಭ್ಯರ್ಥಿಗಳ ಜೊತೆ ಮಾತುಕತೆ ನಡೆಸುತ್ತೇವೆ. ಗೆದ್ದಿರುವ ಮೂವರು ಪಕ್ಷೇತರರು ನಮ್ಮ ಪಕ್ಷದ ಬಂಡಾಯ ಅಭ್ಯರ್ಥಿಗಳೇ. ಹೀಗಾಗಿ ಅವರು ಕಾಂಗ್ರೆಸ್ – ಜೆಡಿಎಸ್ ಜೊತೆ ಹೋಗುವುದಿಲ್ಲ. ಅವರೆಲ್ಲರೂ ನಮಗೆ ಬೆಂಬಲ ನೀಡುತ್ತಾರೆ ಎಂದು ಹೇಳಿದರು.
ಕೇಂದ್ರದಲ್ಲಿ ನರೇಂದ್ರ ಮೋಧಿ ನೇತೃತ್ವದ ಸರ್ಕಾರ ಇದೆ. ಮುಂದಿನ ದಿನಗಳಲ್ಲಿ ರಾಜ್ಯದಲೂ ನಾವೇ ಅಧಿಕಾರ ಹಿಡಿಯುತ್ತವೆ. ಹೀಗಾಗಿ ಪಕ್ಷೇತರರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ನಂಜನಗೂಡಿನಲ್ಲಿ ಬಿಜೆಪಿ ಶಾಸಕ ಹರ್ಷವರ್ಧನ್ ತಿಳಿಸಿದರು.
Key words: The Congress and the JDS internal confusion. We won more place-MLA Harshavardhan
#nanjanagudu #Municipality #MLAHarshavardhan #BJP