ಬೆಳಗಾವಿ,ಸೆಪ್ಟಂಬರ್,29,2022(www.justkannada.in): ಪಿಎಫ್ ಐ ಬ್ಯಾನ್ ಮಾಡಿದ ಬೆನ್ನಲ್ಲೆ ಆರ್ ಎಸ್ ಎಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹರಿಹಾಯ್ದಿದ್ದಾರೆ.
ಈ ಕುರಿತು ಮಾತನಾಡಿದ ನಳೀನ್ ಕುಮಾರ್ ಕಟೀಲ್, ದೇಶದಲ್ಲಿ ಮೊದಲು ಕಾಂಗ್ರೆಸ್ ಪಕ್ಷವನ್ನ ಬ್ಯಾನ್ ಮಾಡಬೇಕು. ಪಿಎಫ್ ಐ ಮತ್ತು ಎಸ್ ಡಿಪಿಐ ಸಂಘಟನೆಗಳಿಗೆ ಶಕ್ತಿ ಕೊಟ್ಟಿದ್ಧೇ ಕಾಂಗ್ರೆಸ್. ಆಂತರಿಕ ಭಯೋತ್ಪಾದನೆ ಚಟವಟಿಕೆ ನಡೆಸಲು ಸಹಕಾರ ಕೊಟ್ಟರು. ಸಿದ್ದರಾಮಣ್ಣ ಒಮ್ಮೆ ಅಧ್ಯಯನ ಮಾಡಲಿ. ಅವರ ಅವಧಿಯಲ್ಲಿ ಎಷ್ಟು ಪಿಎಫ್ ಐ ಕಾರ್ಯಕರ್ತರನ್ನ ರಕ್ಷಿಸಿದ್ದಾರೆ. ಗೋ ಹಂತಕರನ್ನ ರಕ್ಷಣೆ ಮಾಡಿರುವುದನ್ನ ಅಧ್ಯಯನ ಮಾಡಲಿ ಆಗ ಅವರೇ ಕಾಂಗ್ರೆಸ್ ಪಕ್ಷವನ್ನ ನಿಷೇಧಿಸಿ ಅಂತಾರೆ ಎಂದು ಟಾಂಗ್ ನೀಡಿದರು.
ಡಿಕೆ ಶಿವಕುಮಾರ್ ನಿವಾಸದಲ್ಲಿ ಸಿಬಿಐ ಪರಿಶೀಲನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ನಳೀನ್ ಕುಮಾರ್ ಕಟೀಲ್, ಡಿಕೆ ಶಿವಕುಮಾರ್ ಕದ್ದಿದ್ರೆ ಭಯಪಡಬೇಕು. ಮೋದಿ ಅವರನ್ನ 9 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಅಮಿತ್ ಶಾ ಅವರನ್ನ ಜೈಲಿಗೆ ಕಳುಹಿಸಿದ್ದರು. ನಾವು ಆಗ ಬೀದಿಯಲ್ಲಿ ಹೋರಾಟ ಮಾಡಿದ್ವಾ..? ಎಂದು ಪ್ರಶ್ನಿಸಿದರು.
Key words: Congress – banned -first – country-Naleen Kumar Kateel