ಕಾಂಗ್ರೆಸ್ ಎಂದಿಗೂ “15 ಲಕ್ಷದ ಜುಮ್ಲಾ” ಸುಳ್ಳುಗಳನ್ನು ಹೇಳಿಲ್ಲ- ಬಿವೈ ವಿಜಯೇಂದ್ರಗೆ ಕಾಂಗ್ರೆಸ್ ತಿರುಗೇಟು.

ಬೆಂಗಳೂರು,ಮೇ,30,2024 (www.justkannada.in):  ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವಾರ್ಷಿಕವಾಗಿ 1 ಲಕ್ಷ ರುಪಾಯಿ ಹಾಗೂ ತಿಂಗಳಿಗೆ 8 ಸಾವಿರ ರೂ.  ಖಾತೆಗೆ ಹಾಕಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿರುವ ಬಗ್ಗೆ ಟೀಕಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ರಾಜ್ಯ ಕಾಂಗ್ರೆಸ್ ಘಟಕ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಮಾನ್ಯ ಯಡಿಯೂರಪ್ಪನವರ ಪುತ್ರ ವಿಜಯೇಂದ್ರರವರೇ, ಜನ ಕಾಂಗ್ರೆಸ್ ಮೇಲೆ ಇಟ್ಟಿರುವ ನಂಬಿಕೆಯನ್ನು ನೋಡಿ ತಮಗೆ ಸಹಿಸಿಕೊಳ್ಳಲಾಗದಷ್ಟು ತಾಪಮಾನ ಏರುತ್ತಿದೆ! ಜನತೆಗೆ ಈಗಾಗಲೇ ನಾವು “ನುಡಿದಂತೆ ನಡೆಯುತ್ತೇವೆ” ಎಂಬುದು ಖಾತ್ರಿಯಾಗಿದೆ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಸಹ ಜನರಿಗೆ ಖಚಿತವಾಗಿದೆ ಎಂದು ಟಾಂಗ್ ಕೊಟ್ಟಿದೆ.

ಗೃಹಲಕ್ಷ್ಮಿಯಂತೆ “ಮಹಾಲಕ್ಷ್ಮಿ” ಯೋಜನೆಯೂ ಜಾರಿ ಮಾಡುವುದರ ಬಗ್ಗೆ ಜನತೆಗೆ ಅನುಮಾನ ಉಳಿದಿಲ್ಲ, ಏಕೆಂದರೆ ಕಾಂಗ್ರೆಸ್ ಎಂದಿಗೂ “15 ಲಕ್ಷದ ಜುಮ್ಲಾ” ಸುಳ್ಳುಗಳನ್ನು ಹೇಳಿಲ್ಲ! ಅಂದಹಾಗೆ ಬಿವೈ ವಿಜಯೇಂದ್ರ ಅವರೇ, ನೋಟ್ ಬ್ಯಾನ್ ಮಾಡಿದಾಗ ಜನರು ಬ್ಯಾಂಕ್ ಮುಂದೆ ನಿಂತು ಬಿಸಿಲಲ್ಲಿ ಪರದಾಡಿದಾಗ, ನೂರಾರು ಜನರು ಪ್ರಾಣ ಬಿಟ್ಟಾಗ, ದೆಹಲಿ ರಸ್ತೆಯಲ್ಲಿ 700ಕ್ಕೂ ಅಧಿಕ ರೈತರು ಜೀವ ಬಿಟ್ಟಾಗ ನಿಮ್ಮ ಈ ಕಾಳಜಿ, ಆಕ್ರೋಶ ಎಲ್ಲಿ ಅಡಗಿ ಕುಳಿತಿತ್ತು? ಎಂದು  ಬಿವೈ ವಿಜಯೇಂದ್ರಗೆ ಕಾಂಗ್ರೆಸ್ ಚಾಟಿ ಬೀಸಿದೆ.

Key words: congress, bjp, state, president, BY Vijayendra