ಉಡುಪಿ,ಮಾರ್ಚ್,18,2022(www.justkannada.in): ಕರ್ನಾಟಕದಲ್ಲಿ ಕಾಂಗ್ರೆಸ್ ಸ್ವಲ್ಪ ಉಸಿರಾಡುತ್ತಿದೆ. ಕಾಂಗ್ರೆಸ್ ನಾಯಕರೇ ಕಾಂಗ್ರಸ್ ಮುಳುಗಿಸುತ್ತಾರೆ. ಸಿದ್ಧರಾಮಯ್ಯ. ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಅನ್ನ ಉಸಿರುಗಟ್ಟಿಸುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ ಲೇವಡಿ ಮಾಡಿದರು.
ಉಡುಪಿಯಲ್ಲಿ ಇಂದು ಮಾತನಾಡಿದ ಶೋಭಾ ಕರಂದ್ಲಾಜೆ, ವೋಟ್ ಬ್ಯಾಂಕ್ ರಾಜಕಾರಣ ಮಾಡಿದ ಕಾಂಗ್ರೆಸ್ ನಾಪತ್ತೆ ಓಲೈಕೆ ರಾಜಕಾರಣದಿಂದ ಕಾಂಗ್ರೆಸ್ ಕೆಳಹಂತಕ್ಕೆ ಬಿದ್ಧಿದೆ ಇಷ್ಟಾದರೂ ಕಾಂಗ್ರೆಸ್ ನಾಯಕರು ಬುದ್ದಿ ಕಲಿಯಲಿಲ್ಲ. ಕರ್ನಾಟಕವನ್ನ ಮತ್ತೊಂದು ಕಾಶ್ಮೀರ ಮಾಡಲು ಬಿಡಲ್ಲ ಎಂದು ಹೇಳಿದರು.
ನಮ್ಮ ಮಕ್ಕಳಿಗೆ ಬೇಕಿರುವುದು ಉತ್ತಮ ಶಿಕ್ಷಣ. ಶಿಕ್ಷಣ ಮತ್ತು ಉದ್ಯೋಗಕ್ಕೆ ಧರ್ಮ ಇಲ್ಲ. ಶ್ರೀಮಂತರಿಗೆ ಹಿಜಾಬ್ ಜೊತೆ ಯಾವುದೇ ಸಂಬಂಧ ಇಲ್ಲ. ಆದರೆ ಬಡ ಮಕ್ಕಳನ್ನ ಪ್ರಚೋದಿಸಲಾಗುತ್ತಿದೆ ಇದೊಂದು ವ್ಯವಸ್ಥಿತ ಷಡ್ಯಂತ್ರ. ಈ ಪಿತೂರಿಗೆ ಬಲಿಯಾಗಬೇಡಿ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
Key words: congress-central minister-shobha karandlaje