ನುಡಿದಂತೆ ನಡೆದಿದ್ದೇವೆ, 28ಕ್ಕೆ 28 ಕ್ಷೇತ್ರ ಗೆದ್ದೆ ಗೆಲ್ತೀವಿ ; ಕೆ.ಎಚ್.ಮುನಿಯಪ್ಪ.

congress, Dalit, Muniyappa, Mahadevappa

 

ಮೈಸೂರು, ಏ. 11, 2024  :(www.justkannada.in news)   ಲೋಕಸಭಾ ಚುನಾವಣೆ ಹಿನ್ನೆಲೆ,  ದಲಿತ ಮತಗಳ ಮೇಲೆ ಕಣ್ಣಿಟ್ಟ ಕಾಂಗ್ರೆಸ್. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಸಮಾವೇಶ.

ಹೂಟಗಳ್ಳಿಯಲ್ಲಿರುವ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಮಾವೇಶ.

ಸಚಿವರಾದ ಕೆ.ಎಚ್‌.ಮುನಿಯಪ್ಪ, ಡಾ.ಎಚ್‌ಸಿ ಮಹದೇವಪ್ಪ ಸೇರಿದಂತೆ ಅನೇಕ ದಲಿತ ಮುಖಂಡರು ಭಾಗಿ. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಲು ದಲಿತ ಸಮಾಜದ ಮುಖಂಡರ ಸಮಾವೇಶ. ನೂರಾರು ದಲಿತ ಸಂಘಟನೆಗಳ ಕಾರ್ಯಕರ್ತರು ಮುಖಂಡರು ಸಮಾವೇಶದಲ್ಲಿ ಭಾಗಿ.

ಸಮಾರಂಭದಲ್ಲಿ ಮಾತನಾಡಿದ ಸಚಿವ ಕೆಎ.ಎಚ್.ಮುನಿಯಪ್ಪ ಹೇಳಿದಿಷ್ಟು..

ಕೇಂದ್ರ ಸರ್ಕಾರ ಹಣ ಕೊಡುತ್ತೇನೆ ಅಂದ್ರು ಅಕ್ಕಿ‌‌‌ ಕೊಡಲಿಲ್ಲ. ಆದರೂ ಸಿಎ‌ಂ ಸಿದ್ದರಾಮಯ್ಯ ಗ್ಯಾರೆಂಟಿ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. ನುಡಿದಂತೆ ನಡೆದಿದ್ದೇವೆ. 28ಕ್ಕೆ 28 ಕ್ಷೇತ್ರಗಳನ್ನ ಗೆದ್ದೆ ಗೆಲ್ಲುತ್ತೇವೆ. ಈ ಮೂಲಕ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಕೈ ಬಲಪಡಿಸಬೇಕಿದೆ.

72 ಸಾವಿರ ಕೋಟಿ ಸಾಲ‌ ಮನ್ನ ಮಾಡಿದ್ದು ಯುಪಿಎ ಸರ್ಕಾರ. ಕೇಂದ್ರದಲ್ಲಿ ಯುಪಿಯ ಸರ್ಕಾರ ಬರಬೇಕಾದರೇ ನಮ ಅಭ್ಯರ್ಥಿಗಳನ್ನ ಗೆಲ್ಲಿಸಿ. ಸುನೀಲ್ ಬೋಸ್ ಹಾಗೂ ಎಂ.ಲಕ್ಷ್ಮಣ್ ಇಬ್ಬರನ್ನ ಹೆಚ್ಚು ಮತಗಳಿಂದ ಗೆಲ್ಲಿಸಿ. ಸಮಾವೇಶದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿಕೆ.

ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ, ಬಿಜೆಪಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ರಾಜ್ಯಕ್ಕೆ ಅಕ್ಕಿ‌ ನೀಡದಿರುವುದು ಸೇರಿದಂತೆ ಹಲವಾರು ವಿಚಾರಗಳಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಾ ಬಂದಿದೆ.  ಸಮಾಜದಲ್ಲಿ ಒಡಕುಂಟು ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಹತ್ತು ವರ್ಷಗಳಾದರೂ ಸಮಗ್ರ ಅಭಿವೃದ್ಧಿ ಆಗಿಲ್ಲ. ಇದರಿಂದ ಜನಸಾಮಾನ್ಯರು ಬೇಸತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಚಿವ ಮುನಿಯಪ್ಪ.

 

KNOW YOUR CANDIDATE  ಸುನೀಲ್ ಬೋಸ್ ( ಚಾ.ನಗರ ಮೀಸಲು ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿ)

key words : congress, Dalit, Muniyappa, Mahadevappa

ENGLISH SUMMARY : 

In the run-up to the Lok Sabha elections, the Congress is eyeing Dalit votes. Conference of Federation of Dalit Organizations in Chamundeshwari constituency. Meeting at a private marriage hall in Hootagalli.

Ministers K.H. Muniyappa, Dr. H.C. Mahadevappa and many other Dalit leaders participated. Dalit community leaders to support Congress party in 2024 Lok Sabha elections. Hundreds of activists and leaders of Dalit organisations participated in the conference.