ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಬೃಹತ್ ಸೈಕಲ್ ಜಾಥಾ: ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ.

ಮೈಸೂರು,ಜುಲೈ,7,2021(www.justkannada.in):  ಕಳೆದ ಏಳು ವರ್ಷದಲ್ಲಿ ಕೇಂದ್ರ ಸರ್ಕಾರ ರಾಜ್ಯದಿಂದ ಪೆಟ್ರೋಲ್, ಡೀಸೆಲ್ ಮಾರಾಟದ ಮೇಲೆ ವಸೂಲಿ‌ ಮಾಡಿರುವ ತೆರಿಗೆ ಒಂದು ಲಕ್ಷ ಇಪ್ಪತ್ತು  ಸಾವಿರ ಕೋಟಿ. ಕೇಂದ್ರ ಸರ್ಕಾರ ಕೂಡಲೇ ತೆರಿಗೆ ಕಡಿಮೆ ಮಾಡಿ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಬೇಕು ಎಂದು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದರು.

ಮೈಸೂರಿನಲ್ಲಿ ಕಾಂಗ್ರೆಸ್ ನಿಂದ ಆಯೋಜಿಸಿದ್ಧ  ಸಹಾಯಹಸ್ತ ಹಾಗೂ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಕೋವಿಡ್ ನಿಂದ ಮೃತಪಟ್ಟವರ ಮನೆಗೆ ತೆರಳಿ ಕೆಪಿಸಿಸಿಯಿಂದ ಸಹಾಯಹಸ್ತ ನೀಡಲಾಗುತ್ತಿದೆ. ಹಾಗೆಯೇ ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಚೇರಿಯಿಂದ ಗಾಂಧಿ ವೃತ್ತದ ವರೆಗೆ ಬೃಹತ್ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ, ಶಾಸಕ ವೆಂಕಟೇಶ್, ಮಾಜಿ ಶಾಸಕರಾದ ವಾಸು, ಕಳಲೇ ಕೇಶವಮೂರ್ತಿ ಸೇರಿ ಹಲವು ಮುಖಂಡರು ಉಪಸ್ಥಿತರಿದ್ಧರು. ಕಾರ್ಯಕ್ರಮಕ್ಕೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಹಾಗೂ ತನ್ವೀರ್ ಸೇಠ್ ಗೈರಾಗಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಪ್ರಧಾನಿ ನರೇಂದ್ರ ಮೋದಿಯವರು ಅಚ್ಛೇ ದಿನ್ ಬರುತ್ತದೆ ಎಂದರೆ ಕೆಟ್ಟ ದಿನಗಳು ಮುಂದೆ ಕಾದಿವೆ ಎಂದು ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಅತ್ಯಂತ ಕೆಟ್ಟ ಸರ್ಕಾರ ಇದೆ. ಮುಖ್ಯಮಂತ್ರಿ ಮತ್ತು ಅವರ ಮಗ ಜೆಸಿಬಿಯಲ್ಲಿ ಹಣ ದೋಚುತ್ತಿದ್ದಾರೆ. ಯಡಿಯೂರಪ್ಪ ಅವರು ಈಗಾಗಲೇ ಒಂದೂವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಜನರಿಗೆ ಒಳ್ಳೆಯದಾಗಬೇಕಾದರೆ ಈ ಸರ್ಕಾರ ತೊಲಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಬಿಜೆಪಿ ಎಂದರೆ ತಿಗಣೆ ಇದ್ದಂತೆ. ಜನರ ರಕ್ತ ಹೀರುವುದು ಅವರ ಕೆಲಸ. ಆದರೆ ಕಾಂಗ್ರೆಸ್ ಜನರ ಕಣ್ಣೀರು ಒರೆಸುವ ಕೆಲಸ ಮಾಡುತ್ತದೆ ಎಂದು ಹೇಳಿದರು.

ಸುಮಾರು ಮೂರು ಲಕ್ಷ ಜನರು ಕೊರೋನಾದಿಂದ ಸಾವು: ಸರ್ಕಾರದಿಂದ ಸುಳ್ಳು ಲೆಕ್ಕ.

ಕೋವಿಡ್ ನಿಂದ ಸತ್ತಿರೋದು 35ಸಾವಿರ ಅಂತ ಸರ್ಕಾರ ಮಾಹಿತಿ ನೀಡಿದೆ. ಆದರೆ ಅದಕ್ಕಿಂತ 10ಪಟ್ಟು ಹೆಚ್ಚು ಜನ ಕೊರೋನಾದಿಂದ ಸತ್ತಿದ್ದಾರೆ. ಸುಮಾರು ಮೂರು ಲಕ್ಷ ಜನ ಕೊರೊನಾದಿಂದ ಮೃತಪಟ್ಟಿದ್ದಾರೆ.  ರಾಜ್ಯ ಸರ್ಕಾರ ಸಾವಿನ ಲೆಕ್ಕದಲ್ಲಿ ಸುಳ್ಳು ಹೇಳ್ತಿದೆ. ಉದಾಹರಣೆಗೆ ಚಾಮರಾಜನಗರ ಆಕ್ಸಿಜನ್ ದುರಂತವೇ ಸಾಕ್ಷಿ. ಅವರು ಮೂರು ಜನ ಸತ್ತಿದ್ದು ಅಂದ್ರ ನಾವ್ ಹೋದ ಮೇಲೆ 36ಜನ ಸತ್ತಿರೋ ಸಂಗತಿ ಬೆಳಕಿಗೆ ಬಂತು. ಇದನ್ನ ಕೊಲೆ ಅಂತ ಕರೆಯಬೇಕು. ಆಕ್ಸಿಜನ್ ಕೊಡದೇ ಜನರನ್ನು ಸಾಯಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನನಗೆ, ನನ್ ಹೆಂಡ್ತಿಗೆ, ನನ್ ಮಗನಿಗೆ ರೋಗ ಬಂದಿತ್ತು. ಒಂದೇ ಆಸ್ಪತ್ರೆಯಲ್ಲಿ ಮೂವರು ಬೇರೆ ಬೇರೆ ವಾರ್ಡ್‌ನಲ್ಲಿ ಇದ್ವಿ. ಯಾರನ್ನು ಯಾರು ನೋಡದಂತೆ ಆಗೋದಂತ ಕೆಟ್ಟ ರೋಗ ಇದು. ಕೋವಿಡ್ ರೋಗ ಸರಿಯಿಲ್ಲ- ಅತ್ಯಂತ ಕೆಟ್ಟ ರೋಗ. ಹೆಂಡ್ತಿ ಮಕ್ಕಳು ಸಹ ನಮ್ಮ ಜೊತೆ ಬರಲ್ಲ. ಅಷ್ಟು ಕೆಟ್ಟ ರೋಗ ಈ ಕೊರೋನಾ. ಕೊರೋನಾ ಹೋಗುವವರೆಗು ಸೆಲ್ಪಿ ಗಿಲ್ಪಿ ಬೇಡ. ಫೋಟೋಗಳನ್ನ ತೆಗೆಸಿಕೊಳ್ಳೊದು ನಿಲ್ಲಬೇಕು. ಮೊದಲು ಎಲ್ಲರು ಕೊರೋನಾ ನಿಯಮ ಪಾಲಿಸಿ. ಮಾಸ್ಕ್ ಹಾಕಿಕೊಳ್ಳಿ‌, ಲಸಿಕೆ ಹಾಕಿಸಿಕೊಳ್ಳಿ. ಎಲ್ಲರು ತಪ್ಪದೆ ಕಡ್ಡಾಯವಾಗಿ 2 ಡೋಸ್ ವಾಕ್ಸಿನ್ ಹಾಕಿಸಿಕೊಳ್ಳಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕೊರೋನಾ ಪಾಠ ಮಾಡಿದರು.

ಯಡಿಯೂರಪ್ಪ ಸರ್ಕಾರ ವರ್ಸ್ಟ್ ಕರಷ್ಫನ್ ಗೌರ್ಮೆಂಟ್.

ಯಡಿಯೂರಪ್ಪ ಸರ್ಕಾರ ವರ್ಸ್ಟ್ ಕರಷ್ಫನ್ ಗೌರ್ಮೆಂಟ್. ಇದು ಬಡವರ ವಿರೋಧಿ, ಬ್ರಷ್ಟ ಸರ್ಕಾರ. ಇದನ್ನ ಕಿತ್ತೊಗೆಯಬೇಕಾಗಿರೋದು ಎಲ್ಲರ ಜವಬ್ದಾರಿ. ನಾವು ಅಧಿಕಾರಕ್ಕೆ ಬರೋದು ಮುಖ್ಯ ಅಲ್ಲ, ರಾಜ್ಯ ಉಳಿಯೊದು ಮುಖ್ಯ. ಯಡಿಯೂರಪ್ಪ ಎರಡು ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇನ್ನುಳಿದ ವರ್ಷ ಹೀಗೆ ಬಿಟ್ರೆ ಇನ್ನೊಂದ್ ಎರಡುವರೆ ಲಕ್ಷ ಕೋಟಿ ಸಾಲ‌ ಮಾಡ್ತಾರೆ. ಇದು ಮುಂದುವರಿದ್ರೆ ರಾಜ್ಯ ಉಳಿಯುತ್ತಾ.? ಇಂತಹ ಸರ್ಕಾರ ನಮಗೆ ಬೇಕಾ..? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ನಾವೇ ಇದ್ದಿದ್ರೆ ಕ್ರಮ ಕೈಗೊಳ್ತಿದ್ವಿ. ಬಡವರಿಗೆ 10 ಸಾವಿರ ಕೊಡಿ- 10 ಕೆಜಿ ಅಕ್ಕಿ ಕೊಡಿ ಎಂದವು. ಆದರೆ ಮಾನವೀಯತೆ ಇಲ್ಲದಿರುವ ಯಡಿಯೂರಪ್ಪ ಏನು ಮಾಡಲಿಲ್ಲ. ನಮ್ಮ ಸರ್ಕಾರ ಇದ್ದಿದ್ದರೆ 10 ಸಾವಿರ ಹಣ ಹಾಗೂ 10 ಕೆಜಿ ಅಕ್ಕಿ ಕೊಡುತ್ತಿದ್ದವು. ಇದನ್ನ ಕೊಡಲಿಲ್ಲ ಅಂದ್ರೆ ಏನು.? ಹಾಗಾದ್ರೆ ಸರ್ಕಾರ ಬರೋದು ದುಡ್ಡು ಹೊಡೆಯೋಕಾ? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

ಅಪ್ಪ ಮಗ ಇಬ್ಬರು ಸೇರಿ ಜೆಸಿಬಿಯಲ್ಲಿ ತೆಗೆದು ಹಣ ದೋಚುತ್ತಿದ್ದಾರೆ…..

ಅಪ್ಪ ಮಗ ಇಬ್ಬರು ಸೇರಿ ಜೆಸಿಬಿಯಲ್ಲಿ ತೆಗೆದು ಹಣ ದೋಚುತ್ತಿದ್ದಾರೆ. ಇಂತಹ ಕೆಟ್ಟ ಸರ್ಕಾರ ನನ್ನ 40 ವರ್ಷದ ರಾಜಕಾರಣದಲ್ಲಿ ನೋಡಿಲ್ಲ. ಅಪ್ಪ ಮಗ ಸೇರಿ ರಾಜ್ಯದಲ್ಲಿ ಹಣ ಲೂಟಿ‌ ಮಾಡ್ತಿದ್ದಾರೆ. ನಾಚಿಕೆ ಮಾನ ಮರ್ಯಾದೆ ಇಲ್ಲದ ಸರ್ಕಾರ ಇವರದ್ದು. ಕೇವಲ ಭಾಷಣ ಮಾಡಿಕೊಂಡು ಕಾಲ‌ಕಳೆಯುತ್ತಿದೆ ಸರ್ಕಾರ. ಇದು ಲಂಚದ ಸರ್ಕಾರ- ಎಲ್ಲದಕ್ಕು ಲಂಚ ಕೇಳ್ತಾರೆ. ಅಧಿಕಾರಿಗಳ ವರ್ಗಾವಣೆ, ಕಾಮಗಾರಿಗೂ ಲಂಚ ಕೇಳ್ತಿದ್ದಾರೆ. ಪೇಮೆಂಟ್ ಮಾಡಲು ಸಹ 10 ಪರ್ಸೆಂಟ್ ಸರ್ಕಾರ. ಸ್ವಾತಂತ್ರ್ಯ ಬಂದ ಬಳಿಕ ಅತ್ಯಂತ ಕೆಟ್ಟ ಸರ್ಕಾರ ಯಡಿಯೂರಪ್ಪನದ್ದು. ಇಂತಹ ಭ್ರಷ್ಟಾಚಾರದ ಸರ್ಕಾರ ಅದು ಯಡಿಯೂರಪ್ಪನದ್ದು. ಹಣ ಘೋಷಣೆ ಮಾಡೋದು ಯಾರಿಗು ಆ ಹಣ ಕೊಡೋದಿಲ್ಲ. ಇವರದ್ದು ಬಡವರ ವಿರೋಧಿ, ಭ್ರಷ್ಟಾಚಾರ ಸರ್ಕಾರ ಎಂದು ಸಿದ್ಧರಾಮಯ್ಯ ಟೀಕಿಸಿದರು.

Key words: Congress- denounces –oil- price hike- Former CM- Siddaramaiah – government