ಮೈಸೂರು,ಅಕ್ಟೋಬರ್,3,2021(www.justkannada.in): ಮುಂದಿನ ವಿಧಾನ ಸಭೆ ಚುನಾವಣೆಗೂ ಮುಂಚೆಯೇ ಕಾಂಗ್ರೆಸ್ ಎರಡು ಹೊಳಾಗುತ್ತೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಇಮ್ನು ಒಂದೂವರೆ ವರ್ಷ ಕಾಯುವ ಅವಶ್ಯಕತೆ ಇಲ್ಲ. ಡಿ.ಕೆ.ಶಿವಕುಮಾರ್ ಗೂ ಅಧಿಕಾರ ಬೇಕು. ಸಿದ್ದರಾಮಯ್ಯರಿಗೂ ಅಧಿಕಾರ ಬೇಕು. ಇದರಿಂದ ಕಾಂಗ್ರೆಸ್ ಎರಡೂ ಹೊಳಾಗುತ್ತೆ ಎಂದು ಹೇಳಿದರು.
ಕೆಲವರಿಗೆ ಎಂಎಲ್ಎ ಸೀಟ್ ಸಿಗಲಿಲ್ಲ ಅನ್ನೋ ಹುಚ್ಚು, ಟಿಕೆಟ್ ಸಿಗಲಿಲ್ಲ ಅನ್ನೋ ಹುಚ್ಚು. ಸಿದ್ದರಾಮಯ್ಯರಿಗೆ ಹುಚ್ಚು ಕನಸು. ಮುಖ್ಯಮಂತ್ರಿಯಾಗದಿರಲಿ, ಮುಂಬರುವ ಚುನಾವಣೆಯಲ್ಲಿ ಗೆಲ್ಲಲಿ. ಕಳೆದ ಚುನಾವಣೆಯಲ್ಲಿ ಜನ ಯಾಕ್ ಕೈ ಬಿಟ್ರು ನಿಮ್ಮನ್ನ…? ಚಾಮುಂಡೇಶ್ವರಿಲಿ ಯಾಕ್ ಸೋತ್ರಿ..? ಅದನ್ನ ಮೊದಲು ಹೇಳಿ ಆಮೇಲೆ ಕನಸು ಕಾಣಿ ಎಂದು ಸಿದ್ಧರಾಮಯ್ಯಗೆ ಸಚಿವ ಕೆ.ಎಸ್ ಈಶ್ವರಪ್ಪ ಪ್ರಶ್ನಿಸಿದರು.
ಜಾತಿಗಣತಿ ಗಣತಿ ಬಿಡುಗಡೆಗೆ ಆಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ಸಿದ್ದರಾಮಯ್ಯನವರು ಸಂಘಟನೆ ಮಾಡಲು ಅಡ್ಡ ದಾರಿ ತುಳಿದಿದ್ದಾರೆ. ಸದನದಲ್ಲಿ ಜಾತಿಗಣತಿ ಬಗ್ಗೆ ಯಾಕೆ ಮಾತಾನಾಡಲಿಲ್ಲ. ಸಿದ್ದರಾಮಯ್ಯನವರೇನು ಬಾಯಲ್ಲಿ ಕಡುಬು ಇಟ್ಟುಕೊಂಡಿದ್ರಾ..? ಸದನದಲ್ಲಿ ಜಾತಿಗಣತಿಯ ಧ್ವನಿ ಮಾಡ್ತೀವಿ ಅಂದ್ರಿ ಮಾಡುದ್ರಾ..? ಯಾಕೆ ಜಾತಿಗಣತಿ ಬಗ್ಗೆ ಮಾತಡಲಿಲ್ಲ. ಹಿಂದುಳಿದಿರುವ, ಅಲ್ಪಸಂಖ್ಯಾತರು ನಿಮಗೆ ಹೆಸರಿಗೆ ಮಾತ್ರನಾ..? ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಜಾತಿಗಣತಿ ವರದಿ ಸಿದ್ದವಾಗಿದ್ದರೂ ಕುಮಾರಸ್ವಾಮಿ ಮಂಡಿಸಲಿಲಿಲ್ಲ. ಆಗ ನಿಮ್ಮ ಬೆಂಬಲ ವಾಪಸ್ ತಗೋಬೇಕಿತ್ತು. ಯಾಕೆ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು. ಇವರಿಗೆ ಯಾವುದು ಬೇಕಾಗಿಲ್ಲ. ಅಧಿಕಾರವೊಂದೆ ಇವರ ಗುರಿ ಎಂದು ಟೀಕಿಸಿದರು.
ಈ ಎರಡು ಹುಚ್ಚರನ್ನ ಹುಚ್ಚಾಸ್ಪತ್ರೆಗೆ ಸೇರಿಸಬೇಕು.
ಮೈಸೂರು ಭಾಗದಲ್ಲಿ 20ಕ್ಕೂ ಹೆಚ್ಚು ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಸಿದ್ದರಾಮಯ್ಯ ಅವರಿಗೆ ಹೇಗಾದರೂ ಸರಿ ಸಿಎಂ ಆಗಬೇಕು ಅನ್ನೋ ಹುಚ್ಚು. ಡಿಕೆ ಶಿವಕುಮಾರ್ ಗೆ ಬಿಜೆಪಿಯವರನ್ನ ಹೇಗಾದರೂ ಎಳೆದುಕೊಳ್ಳಬೇಕು ಅನ್ನೋ ಹುಚ್ಚು. ಈ ಎರಡು ಹುಚ್ಚರನ್ನ ಹುಚ್ಚಾಸ್ಪತ್ರೆಗೆ ಸೇರಿಸಬೇಕು. ಇದಕ್ಕೆ ಬೇರೆ ಏನು ಉತ್ತರ ಇಲ್ಲ ಎಂದು ವ್ಯಂಗ್ಯವಾಡಿದರು.
ಮುಂದಿನ ಚುನಾವಣೆ ಅತಂತ್ರ ಮಾಡುವುದು ಜೆಡಿಎಸ್ ಉದ್ದೇಶ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ಕುಮಾರಸ್ವಾಮಿ ಅವರ ಉದ್ದೇಶವನ್ನು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಕಷ್ಟ, ನೋವನ್ನ ಹೇಳಿಕೊಂಡಿದ್ದಾರೆ. ಅತಂತ್ರ ಸ್ಥಿತಿಯಾದರೆ ಯಾವುದಾರೂ ಪಕ್ಷದ ಜೊತೆ ಸೇರಿಕೊಂಡು ಆಡಳಿತ ಮಾಡಬಹುದು ಅನ್ನೋ ಭ್ರಮೆಯಲ್ಲಿ ಇದ್ದಾರೆ. ಅತಂತ್ರ ಅನ್ನೋ ಭಾವನೆ ಕುಮಾರಸ್ವಾಮಿ ಅವರಲ್ಲಿ ಇರಬಹುದು. ಅವರ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ ಎಂದರು.
Key words: Congress – Divide-next- assembly –election-minister – KS Eshwarappa.