ಬೆಂಗಳೂರು,ಡಿಸೆಂಬರ್,16,2021(www.justkannada.in): ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಆರೋಪ ಮಾಡಿ ಪ್ರತಿಭಟನಾ ರ್ಯಾಲಿ ನಡೆಸಿದ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ವ್ಯವಸ್ಥೆಯೊಳಗೆ ಪರ್ಸೇಂಟೇಜ್ ಬಿತ್ತಿದ್ಯಾರು. ಪರ್ಸಂಟೇಜ್ ಶುರು ಮಾಡಿದ್ದೇ ಕಾಂಗ್ರೆಸ್. ಕಾಂಗ್ರೆಸ್ ನವರೇ ಪರ್ಸೇಂಟೇಜ್ ಪಿತಾಮಹರು ಎಂದು ಆರೋಪಿಸಿದರು.
ನೊಟ್ ಬ್ಯಾನ್ ವೇಳೆ ಇಂಜಿನಿಯರ್ ಗಳ ಬಳಿ ದುಡ್ಡು ಸಿಕ್ತು. ಇಬ್ಬರು ಇಂಜಿನಿಯರ್ ಗಳು ಡಿಕೆಶಿ ಸಿದ್ಧು ಪರಮಾಪ್ತರು. ಅವರಿಗೆ ದುಡ್ಡು ಎಲ್ಲಿಂದ ಬಂತು. ಹೀಗಾಗಿ ಬೇರು ಸಹಿತ ಪರ್ಸೇಂಟೇಜ್ ಕಿತ್ತು ಹಾಕಲು ಆಗಲ್ಲ ಎಂದು ಸಿ.ಟಿ ರವಿ ತಿಳಿಸಿದರು.
Key words: Congress- fathers of Percentage-Former minister- CT Ravi