ಬೆಂಗಳೂರು,ಅಕ್ಟೋಬರ್,6,2023(www.justkannada.in): ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಜನವರಿ ನಂತರ ಬಿದ್ದು ಹೋಗಲಿದೆ ಎಂದು ಮಾಜಿ ಸಚಿವ ಆರ್.ಅಶೋಕ್ ಭವಿಷ್ಯ ನುಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್.ಅಶೋಕ್, ಇದು ಭ್ರಷ್ಟಾಚಾರದ ವರ್ಗಾವಣೆ ದಂಧೆಯ ಅತಿರೇಕದ ಸರ್ಕಾರ . ಕಾಂಗ್ರೆಸ್ನಲ್ಲಿ ಗ್ಯಾಂಗ್ಗಳಾಗಿವೆ ಹಾಗಾಗಿ ನಿಲ್ಲಲ್ಲ. ಮೂವರು ಡಿಸಿಎಂ ಮತ್ತು ಆರು ಡಿಸಿಎಂ ಎಂದು ಕಚ್ಚಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ಬಿದ್ದೋಗುತ್ತೆ ಎಂದರು.
ಇನ್ನು ಎಸ್.ಟಿ ಸೋಮಶೇಖರ್ ಅವರನ್ನ ಕರೆದು ಮಾತನಾಡುವ ಕೆಲಸ ಮಾಡುತ್ತೇವೆ. ಅವರು ಮುಂಚೆ ಅಲ್ಲಿದ್ದವರಲ್ಲ, ಅವರನ್ನ ಬಿಜೆಪಿಗೆ ನಾನೇ ಕರೆದುಕೊಂಡು ಬಂದಿದ್ದು, ಹಾಗಾಗಿ ಮಾತಾಡಿದ್ದಾರೆ ಎಂದರು.
ಶಿವಮೊಗ್ಗ ಗಲಾಟೆ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್, ಶಿವಮೊಗ್ಗದಲ್ಲಿ ನಡೆದ ಘಟನೆ ಕಾಂಗ್ರೆಸ್ ಪ್ರೇರಿತ. ಪ್ರಕರಣ ನ್ಯಾಯಾಂಗ ತನಿಖೆಯಾಗಬೇಕು. ಅಭಿವೃದ್ದಿಗೆ ದುಡ್ಡಿಲ್ಲವೆಂದು ಶಾಸಕರು ಬಾಯಿ ಬಡದುಕೊಳ್ಳುತ್ತಿದ್ದಾರೆ, ಆದರೆ ಮುಸ್ಲೀಂರಿಗೆ 10 ಸಾವಿರ ಕೋಟಿ ರೂ ಕೊಡಲು ಹೊರಟಿದ್ದಾರೆ. ಇಡೀ ವ್ಯವಸ್ಥೆಯನ್ನ ಹಾಳಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಕಿಡಿಕಾರಿದರು.
Key words: Congress -government – fall- after- January- former minister -R. Ashok