ಬೆಂಗಳೂರು,ಡಿಸೆಂಬರ್,12,2024 (www.justkannada.in): ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಅಕ್ಷಮ್ಯ ಅಪರಾಧ. ಕಾಂಗ್ರೆಸ್ ಸರ್ಕಾರ ಎರಡು ನಾಲಿಗೆ ಸರ್ಕಾರ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು.
ಈ ಕುರಿತು ಇಂದು ಮಾತನಾಡಿದ ಆರ್.ಅಶೋಕ್, ಬಸವಣ್ಣನವರ ಅನುಯಾಯಿಗಳ ಮೇಲೆ ಲಾಠಿ ಏಟು ಕೊಟ್ಟಿದ್ದಾರೆ. ಬಿಜೆಪಿ ಅವಧಿಯಲ್ಲಿ ಲಿಂಗಾಯತರ ಹೋರಾಟ ತಡೆದಿಲ್ಲ. ಸಣ್ಣ ಗಲಾಟೆ ಆಗದಂತೆ ತಡೆದಿದ್ದೇವೆ. ಅಮಾಯಕ ಲಿಂಗಾಯತರ ಮೇಲೆ ಲಾಠಿಚಾರ್ಜ್ ಆಗಿದೆ. ಇದೊಂದು ಅಕ್ಷಮ್ಯ ಅಪರಾಧ ಎಂದು ವಾಗ್ದಾಳಿ ನಡೆಸಿದರು.
ಇದುವರೆಗೆ ಯಾರೂ ಲಿಂಗಾಯತರ ಮೇಲೆ ಕೈ ಎತ್ತಿಲ್ಲ. ಮೊದಲ ಬಾರಿಗೆ ಸಿದ್ದರಾಮಯ್ಯ ಕೈ ಎತ್ತಿದ್ದಾರೆ. ರಾಜ್ಯದಲ್ಲಿ ಹಿಟ್ಲರ್ ಸರ್ಕಾರವಿದೆ. ತುಘಲಕ್ ಸರ್ಕಾರದ ವಿರುದ್ದ ನಮ್ಮ ಹೋರಾಟ ಎಂದು ಆರ್.ಅಶೋಕ್ ಹರಿಹಾಯ್ದರು.
Key words: Congress ,two-tongued, government, R. Ashok