ಬೆಂಗಳೂರು,ಮೇ,16,2023(www.justkannada.in): ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿಗಳಿಗೆ ಷರತ್ತು ಅನ್ವಯ. ಕೆಲ ಕಂಡಿಷನ್ ಅನ್ವಯವಾಗಲಿದೆ ಎಂದು ಹೇಳಿಕೆ ನೀಡಿದ್ದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಗೆ ಶಾಸಕ ಅಶ್ವಥ್ ನಾರಾಯಣ್ ಟಾಂಗ್ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅಶ್ವಥ್ ನಾರಾಯಣ್, ಜನರಿಗೆ ನೀಡಿರುವ ಗ್ಯಾರಂಟಿಗಳಿಗೆ ಕಾಂಗ್ರೆಸ್ ಇದೀಗ ಷರತ್ತು ವಿಧಿಸುತ್ತಿದೆ. ಎಲ್ಲರಿಗೂ ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಕಾಂಗ್ರೆಸ್ ಹೇಳಿತ್ತು. ಈಗ ಕೊಟ್ಟ ಭರವಸೆಗಳಿಗೆ ಷರತ್ತು ಅನ್ವಯ ಎನ್ನುತ್ತಿದ್ದಾರೆ. ಜನರಿಗೆ ನೀಡಿದ ಭರವಸೆಗಳನ್ನು ಕಾಂಗ್ರೆಸ್ ಈಡೇರಿಸಲಿ. ರಾಜ್ಯದ ಜನತೆಗೆ 200 ಯುನಿಟ್ ವಿದ್ಯುತ್ ಉಚಿತ, ನಿರುದ್ಯೋಗ ಭತ್ಯೆ ಸೇರಿ ಹಲವು ಭರವಸೆಗಳನ್ನ ನೀಡಿದ್ದಾರೆ. ಇದನ್ನ ಎಲ್ಲರಿಗೂ ಕೊಡಲಿ ಎಂದು ಆಗ್ರಹಿಸಿದರು.
ಹಳ್ಳಿಗಳಲ್ಲಿ ವಿದ್ಯುತ್ ಬಿಲ್ ಕಟ್ಟಲು ನಿರಾಕರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ್, ಕಾಂಗ್ರೆಸ್ ನಾಯಕರು ಹೇಳಿರುವುದನ್ನು ಜನ ಪಾಲಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರೆಂಟ್ ಬಿಲ್ ಕಟ್ಟುವಂತಿಲ್ಲ ಅಂತ ಹೇಳಿದ್ದರು, ಅದಕ್ಕೆ ಕಟ್ಟುತ್ತಿಲ್ಲ ಎಂದರು.
Key words: congress- Guarantee- condition- Fulfill -Ashwattha Narayan