ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ಷಡ್ಯಂತ್ರ ಇದೆ- ಸಚಿವ ಆರ್.ಅಶೋಕ್ ಆರೋಪ.

ಬೆಂಗಳೂರು,ಫೆಬ್ರವರಿ,9,2022(www.justkannada.in):  ರಾಜ್ಯದಲ್ಲಿ ಉಂಟಾಗಿರುವ ಹಿಜಾಬ್,ಕೇಸರಿ ಶಾಲು ವಿವಾದದ ಹಿಂದೆ ಕಾಂಗ್ರೆಸ್ ಷಡ್ಯಂತ್ರ ಇದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಆರೋಪ ಮಾಡಿದ್ದಾರೆ.

ಹಿಜಾಬ್ ವಿವಾದ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಆರ್.ಅಶೋಕ್,  ಕಾಲೇಜಿನೊಳಗೆ ಹಿಜಾಬ್ ಕೇಸರು ಶಾಲು ಹಾಕಲು ಅನುಮತಿ ಇಲ್ಲ. ಸರ್ಕಾರ ವಸ್ತ್ರ ಸಂಹಿತೆಯನ್ನ ಜಾರಿ ಮಾಡಿದೆ.  ಸರ್ಕಾರ ಆದೇಶ ಉಲ್ಲಂಘಿಸುವುದು ಸರಿಯಲ್ಲ. ಕಾಲೇಜಿನೊಳಗೆ ಕೇಸರಿ ಶಾಲು ಹಿಜಾಬ್ ಹಾಕುವುದು ತಪ್ಪು ಎಂದರು.

ಹಿಜಾಬ್ ಹಾಕಿದ್ದಕ್ಕೆ ಕೇಸರಿ ಶಾಲು ಧರಿಸಿದ್ದಾರೆ ಈಗ ಎರಡನ್ನೂ ತೆಗೆಯಬೇಕೆಂದು ನಾವು ಹೇಳಿದ್ದೇವೆ. ಪರಿಸ್ಥಿತಿ ನಿಭಾಯಿಸಲು ರಜೆ ನೀಡಿದ್ದೇವೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ರಾಷ್ಟ್ರಧ್ವಜ ಇಳಿಸಲಾಗಿದೆ ಎಂಬ ಹೇಳಿಕೆ ವಿಚಾರ ಡಿಕೆಶಿ ಹೇಳಿಕೆ ಪರಿಗಣಿಸಲು ಆಗಲ್ಲ. ಆದ್ರೆ ಕೇಸರಿ ಭಾವುಟ ಹಾರಿಸಿದ್ದು ತಪ್ಪು ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

Key words: Congress- hijab –controversy-Minister- R. Ashok

ENGLISH SUMMARY….

Minister R. Ashok alleges Cong. hand behind hijab controversy
Bengaluru, February 9, 2022 (www.justkannada.in): Revenue Minister R. Ashok has alleged hands of the Congress party behind the hijab, saffron shawl row in the State.
Speaking to the media persons today, he said, “there is no permission to wear hijab or saffron shawls inside the schools and colleges. The government has enforced uniform code. It is not correct to violate the government rule. It is wrong to wear either a hijab or saffron shawl inside colleges.”
Keywords: Hijab row/ Revenue Minister R. Ashok/ Congress hand