ಮೈಸೂರು,ಸೆ,25,2019(www.justkannada.in): ಹುಣಸೂರು ಉಪ ಚುನಾವಣೆಗೆ ಕಾಂಗ್ರೆಸ್ ಪಡೆ ಸಜ್ಜಾಗುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಚ್ ಪಿ ಮಂಜುನಾಥ್ ಕಣಕ್ಕಿಳಿಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಕ್ಟೋಬರ್ 21 ರಂದು ಅನರ್ಹ ಶಾಸಕರ 15 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಹೀಗಾಗಿ ಶೀಘ್ರದಲ್ಲೇ ಅಭ್ಯರ್ಥಿಗಳನ್ನ ಫೈನಲ್ ಮಾಡಬೇಕಿದೆ. ಇನ್ನು ಹುಣಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಚ್ ಪಿ ಮಂಜುನಾಥ್ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ. ನಾಳೆ ಸಂಜೆಯೊಳಗೆ ಕೆಪಿಸಿಸಿಯಿಂದ ಅಧಿಕೃತವಾಗಿ ಮಂಜುನಾಥ್ ಹೆಸರು ಹೊರ ಬೀಳುವ ನೀರಿಕ್ಷೆ ಇದೆ.
ಹೆಚ್.ಪಿ ಮಂಜುನಾಥ್ ಅವರು ಸೆಪ್ಟೆಂಬರ್ 30 ರಂದು ಕೈ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಇನ್ನು ಶಿಷ್ಯ ಮಂಜುನಾಥ್ ಪರ ಮಾಜಿ ಸಿಎಂ ಸಿದ್ಧರಾಮಯ್ಯ ಅಕ್ಟೋಬರ್ 4 ರಂದು ಹುಣಸೂರಿಗೆ ಆಗಮಿಸಿ ಪ್ರಚಾರ ಮಾಡಲಿದ್ದಾರೆ. ಹುಣಸೂರು ಕ್ಷೇತ್ರದಲ್ಲಿ ತಮ್ಮ ಶಿಷ್ಯನ ಗೆಲುವಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಂತ್ರ ಎಣೆದಿದ್ದಾರೆ.
Key words: Congress –hunsur-by-election-Nomination -candidate – Sept. 30 …