ವಿಜಯಪುರ,ಅ,28,2019(www.justkannada.in): ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ. ಈ ಹಿಂದೆ ಟಿಪ್ಪು ಜಯಂತಿ ಮಾಡಿದ ರೀತಿಯೇ ತಪ್ಪು ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಯು ಟರ್ನ್ ಹೊಡೆದಿದ್ದಾರೆ.
ವಿಜಯಪುರದಲ್ಲಿ ಇಂದು ಮಾತನಾಡಿದ ಸಿಎಂ ಇಬ್ರಾಹಿಂ, ಮುಸ್ಲಿಂ ಸಮುದಾಯದಲ್ಲಿ ಜಯಂತಿ ಪರಿಕಲ್ಪನೆ ಇಲ್ಲ. ನಮ್ಮಲ್ಲಿ ಮೂರ್ತಿ ಇಲ್ಲ. ಟಿಪ್ಪು ಜಯಂತಿ ಮಾಡಿದ್ದೇ ತಪ್ಪು, ಭಾವಚಿತ್ರಕ್ಕೆ ಹಾರೋ ಹಾಕುವ, ಮೆರವಣಿಗೆ ಪದ್ಧತಿ ಮುಸ್ಲಿಂ ಸಮುದಾಯದಲ್ಲಿಲ್ಲ. ಜಯಂತಿ ಮಾಡೋ ರೀತಿಯಲ್ಲಿ ಆಚರಿಸಿ, ಜಯಂತಿ ಆಚರಣೆ ಜವಾಬ್ದಾರಿಯನ್ನು ಸಮುದಾಯಕ್ಕೆ ಕೊಡಿ ಎಂದು ತಿಳಿಸಿದರು.
ಇದೇ ವೇಳೆ ಸಿಎಂ ಬಿ.ಎಸ್ ಯಡಿಯೂರಪ್ಪ ಬಗ್ಗೆ ಟೀಕೆ ವ್ಯಕ್ತಪಡಿಸಿದ ಸಿಎಂ ಇಬ್ರಾಹಿಂ, ಬಿಜೆಪಿಗೆ ಸಿಎಂ ಬಿಎಸ್ ಯಡಿಯೂರಪ್ಪ ಒಲ್ಲದ ಗಂಡನಾಗಿದ್ದಾರೆ. ಬಿಎಸ್ ಯಡಿಯೂರಪ್ಪಗೆ ಸಹಕಾರ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿದೆ. ಜನವರಿಯಲ್ಲಿ ಚುನಾವಣೆ ಬರಲಿದೆ ಎಂದು ಭವಿಷ್ಯ ನುಡಿದರು.
ಹಾಗೆಯೇ ಕೇಂದ್ರ ಸರ್ಕಾರದ ವಿರುದ್ದವೂ ವಾಗ್ದಾಳಿ ನಡೆಸಿದ ಸಿಎಂ ಇಬ್ರಾಹಿಂ, ದೇಶದಲ್ಲಿ ಚೀನಾ, ಪಾಕಿಸ್ತಾನ ಸಮಸ್ಯೆ ಇಲ್ಲ. ಹೀಗಾಗಿ ಕೇಂದ್ರ ಸರ್ಕಾರ ಆಂತರಿಕ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು. ಆದರೆ ದೇಶದಲ್ಲಿ ದೀಪಾವಳಿ ಸಮಯದಲ್ಲಿ ಓಂ ಜಿಎಸ್ ಟಿಯಾಯ ನಮಃ ಡಿಜಿಟಲಾಯ ನಮಃ ಡೆಬಿಟ್ ಕಾರ್ಡಾಯ ನಮಃ ಎನ್ನುಂವತಾಗಿದೆ. ಬಿಜೆಪಿಗೆ ಬೇರೆ ಪಕ್ಷದವರನ್ನ ಕರೆ ತರುವುದು ಹೇಗೆ ಬಾರದಿದ್ದರೇ ಜೈಲಿಗೆ ಕಳಿಸೋದು ಹೇಗೆ ಎಂಬ ಬಗ್ಗೆ ಕೇಂದ್ರ ಚಿಂತಿಸುತ್ತಿದೆ ಎಂದು ಕಿಡಿಕಾರಿದರು.
Key words: congress leader- CM Ibrahim- Tipu Jayanti – wrong-vijaypur