ಕಲ್ಬರ್ಗಿ,ಜುಲೈ,1,2022(www.justkannada.in): ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಆಘಡಿ ಸರ್ಕಾರ ಪತನವಾಗಿ ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಈ ಕುರಿತು ಪ್ರತಿಕ್ರಿಯಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಕಲ್ಬುರ್ಗಿಯಲ್ಲಿ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ಜನರಿಂದ ನಾವು ಅಧಿಕಾರ ಕಳೆದುಕೊಂಡಿದ್ದಲ್ಲ. ಅಧಿಕಾರ ಹಣ ಬಲದಿಂದ ಬಿಜೆಪಿ ಅಪರೇಷನ್ ಕಮಲ ಮಾಡಿದೆ. ಬಿಜೆಪಿಯವರು ಜನಬಲದಿಂದ ಅಧಿಕಾರಕ್ಕೆ ಬರುತ್ತಿಲ್ಲ. ಹಣಬಲದಿಂದ ಅಧಿಕಾರಕ್ಕೆ ಬರುತ್ತಿದ್ದಾರೆ. ಆಪರೇ಼ಷನ್ ಕಮಲ ಪ್ರಜಾಪ್ರಭುತ್ವದಕ್ಕೆ ದೊಡ್ಡ ಪೆಟ್ಟು. ಅಧಿಕಾರದಲ್ಲಿದ್ದರೂ ಪ್ರಧಾನಿ ಮೋದಿಗೆ ತೃಪ್ತಿ ಇಲ್ಲ ಎಂದು ಕಿಡಿಕಾರಿದರು.
ಶಾಸಕರಿಗೆ ಹಣದ ಆಮಿಷ ತೋರಿಸಿ ಸರ್ಕಾರ ಬೀಳಿಸಿದರು. ಇಡಿ ಐಟಿ ಸಿಬಿಐ ಹೆಸರಿನಲ್ಲಿ ಶಾಸಕರನ್ನ ಬೆದರಿಸುತ್ತಿದ್ದಾರೆ ಎಂದು ಖರ್ಗೆ ಹರಿಹಾಯ್ದರು
ಇನ್ನು ಉದಯಪುರದಲ್ಲಿ ಕನ್ಹಯ್ಯಲಾಲ್ ಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಹತ್ಯೆಯನ್ನ ತೀವ್ರವಾಗಿ ಖಂಡಿಸುವೆ. ಕಾನೂನಿನ ಪ್ರಕಾರ ಹಂತಕರಿಗೆ ಶಿಕ್ಷೆಯಾಗಬೇಕು ಸಿಎಂ ಗೆಹ್ಲೋಟ್ ತಕ್ಷಣ ಕ್ರಮ ಕೈಗೊಂಡಿದ್ದಾರೆ ಎಂದರು.
Key words: Congress-leader-Mallikarjun kharge-pm- modi