ನವದೆಹಲಿ,ಸೆಪ್ಟಂಬರ್,19,2023(www.justkannada.in): ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಮಾಡಲು ಒಪ್ಪಿಗೆ ನೀಡಲಾಗಿದ್ದು ಈ ಸಂಬಂಧ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
ನಿನ್ನೆಯಿಂದ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗದ್ದು’ಮಹಿಳಾ ಮೀಸಲಾತಿ ಮಸೂದೆ’ ಮಂಡನೆಯಾಗುವ ಸಾಧ್ಯತೆ ಇದೆ. ಈ ಕುರಿತು ಮಾತನಾಡಿರುವ ಸೋನಿಯಾ ಗಾಂಧಿ, ‘ಈ ಮಸೂದೆ ನಮ್ಮದು’ ಎಂದು ಹೇಳಿದ್ದಾರೆ.
ಇಂದು ಹಳೆಯ ಸಂಸತ್ ಭವನಕ್ಕೆ ವಿದಾಯ ಹೇಳಿದ್ದು ಇಂದಿನಿಂದ ಕಲಾಪಗಳು ಹೊಸ ಸಂಸತ್ ಭವನದಲ್ಲಿ ನಡೆಯಲಿದೆ. ಈ ನಡುವೆ ಕಲಾಪದಲ್ಲಿ ಪಾಲ್ಗೊಳ್ಳಲು ಸಂಸತ್ತಿಗೆ ಪ್ರವೇಶಿಸುತ್ತಿರುವ ವೇಳೆ ಮಸೂದೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೋನಿಯಾ ಗಾಂಧಿಯವರು, ಈ ಮಸೂದೆ ನಮ್ಮದು, ಅಪ್ನಾ ಹೈ ಎಂದು ಹೇಳಿದ್ದಾರೆ.
Key words: Congress-leader -Sonia Gandhi – women’s- reservation- bill -ours.