ಸಚಿವರೇ ನಿಯಮ ಉಲ್ಲಂಘಿಸಿದರೆ ಕ್ರಮ ಇಲ್ವಾ? ಶ್ರೀರಾಮುಲು ವಿರುದ್ಧ ಉಗ್ರಪ್ಪ ಆಕ್ರೋಶ

ಬೆಂಗಳೂರು, ಜೂನ್ 02, 2020 (www.justkannada.in): ಶ್ರೀರಾಮುಲು ಜನಸಂದಣಿ ಸೇರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಉಗ್ರಪ್ಪ ಆರೋಪಿಸಿದ್ದಾರೆ.

ಮಾರ್ಚ್ 9 ರಂದು ರಾಜ್ಯದಲ್ಲಿ ಒಂದೇ ಒಂದು ಕೇಸ್ ಇತ್ತು. ಈಗ ಮೂರುವರೆ ಸಾವಿರ ಕೇಸ್ ರಾಜ್ಯದಲ್ಲಿವೆ. ಲಾಕ್ ಡೌನ್ ಇದ್ರೂ ಇಷ್ಟೊಂದು ಕೇಸ್ ಹೇಗೆ ಬಂತು? ಕೊವಿಡ್ ಹಿನ್ನೆಲೆ ೮೪ ಗೈಡ್ ಲೈನ್ಸ್ ಕೊಟ್ಟಿದ್ದಾರೆ. ಈ ಗೈಡ್ ಲೈನ್ಸ್ ಯತಾವತ್ತಾಗಿ ಪಾಲನೆ ಯಾಗ್ತಿವೆಯೇ? ಶ್ರೀರಾಮುಲು ಇವತ್ತು ಮಾಡಿರೋದೇನು..? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮುಲು ಸರ್ಕಾರದ ಪ್ರತಿನಿಧಿಯಾಗಿದ್ದಾರೆ. ಚಿತ್ರದುರ್ಗದ ವೇದಾವತಿ ನದಿಗೆ ಬಾಗಿನ ಅರ್ಪಿಸಿದ್ದಾರೆ. ಆದರೆ ಬಾಗಿನ ಬಿಡುವಾಗ ಸಾವಿರಾರು ಮಂದಿ ಸೇರಿದ್ದಾರೆ. ಮಾಸ್ಕ್ ಇಲ್ಲ,ಸೋಶಿಯಲ್ ಡಿಸ್ಟೇನ್ಸ್ ಇಲ್ಲ. ಮಕ್ಕಳು,ಮರಿ ಸೇರಿ ಸಾವಿರಾರು ಮಂದಿ ಸೇರಿದ್ದಾರೆ. ಇದು ಅವರದೇ ಸರ್ಕಾರದ ಗೈಡ್ ಲೈನ್ಸ್ ಉಲ್ಲಂಘನೆಯಲ್ವೇ? ಎಂದು ಪ್ರಶ್ನಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾಡಳಿತ,ತಾಲೂಕಾಡಳಿತ ಏನು ಮಾಡ್ತಿದೆ? ಈ ಕಾರ್ಯಕ್ರಮಕ್ಕೆ ಮೊದಲೇ ತಯಾರಿ ನಡೆಸಿರೋದು ಪಕ್ಕಾ. ಎರಡೂವರೆ ಸಾವಿರ ಸೇಬಿನ ಹಾರ ಅಂದರೆ ತಿಳಿಯಿರಿ… ಅದು ಮೊದಲೇ ಫ್ಲಾನ್ ಅಗಿರೋ ಕಾರ್ಯಕ್ರಮ ಅಲ್ವಾ? ಶ್ರೀರಾಮುಲು ಸಂಪೂರ್ಣ ಕಾನೂನು ಉಲ್ಲಂಘಿಸಿದ್ದಾರೆ. ರಾಮುಲು ವಿರುದ್ಧ ಪ್ರಕರಣ ದಾಖಲಿಸಬೇಕು. ಇದರ ಬಗ್ಗೆ ಜೈಲುಶಿಕ್ಷೆ,ದಂಡ ವಿಧಿಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.