ಬೆಂಗಳೂರು,ಫೆಬ್ರವರಿ,19,2022(www.justkannada.in): ಬಿಜೆಪಿಗರದ್ದು ಬೋಗಸ್ ದೇಶಭಕ್ತಿ. ಬಿಜೆಪಿ ದೇಶದ ಪರವಾಗಿ ಇದೆ ಅನ್ನೋದಾದ್ರೆ ಮೋದಲು ಸಚಿವ ಸ್ಥಾನದಿಂದ ಕೆ.ಎಸ್ ಈಶ್ವರಪ್ಪರನ್ನ ವಜಾ ಮಾಡಿ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕರ ಜಂಟಿ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಸಚಿವ ಈಶ್ವರಪ್ಪನವರನ್ನ ರಾಜೀನಾಮೆ ಕೇಳುತ್ತಿದ್ದೇವೆರಾಷ್ಟ್ರಧ್ವಜದ ಬದಲಾಗಿ ಭಾಗಧ್ವಾಜ ಹಾರಿಸುತ್ತೇವೆ ಎಂದಿದ್ದಾರೆ. ಅದನ್ನ ಮತ್ತೆ ಮತ್ತೆ ಈಶ್ವರಪ್ಪ ಸಮರ್ಥನೆ ಮಾಡಿಕೊಂಡಿದ್ದಾರೆ 500 ವರ್ಷಕ್ಕೆ ಬದಲಾವಣೆ ಆಗುತ್ತದೆ ಎಂದಿದ್ದಾರೆ. ಅದು ಮುಖ್ಯ ಅಲ್ಲ, ಪ್ರಸ್ತುತ ಅದು ಸಂವಿಧಾನ ವಿರೋಧ ಎಂದರು.
ಆರ್ ಎಸ್ ಎಸ್ ನ ಗೂಡ್ಸೆ ಗಾಂಧೀಜಿಯನ್ನು ಕೊಲ್ಲುತ್ತಾರೆ. ಅಂದಿನ ಉಪಪ್ರಧಾನಿ ಪಟೇಲ್ ರವರು ಆರ್ ಎಸ್ ಎಸ್ ಬ್ಯಾನ್ ಮಾಡ್ತಾರೆ. ದೇಶದ್ರೋಹದ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಬ್ಯಾನ್ ಮಾಡುತ್ತಾರೆ. ಕೆಲವು ವರ್ಷಗಳ ಬಳಿಕ ನಿಷೇಧವನ್ನು ತೆಗೆಯುತಾರೆ. ಯಾವುದೇ ರಾಜಕಾರಣದಲ್ಲಿ ಭಾಗಿಯಾಗಬಾರದು ಅಂತಾ ಷರತ್ತು ಹಾಕ್ತಾರೆ. ಸಂವಿಧಾನಕ್ಕೆ ಬದ್ದವಾಗಿರಬೇಕೆಂದು ನಿಷೇಧ ವಾಪಸ್ಸು ಪಡೆಯುತ್ತಾರೆ ಎಂದು ಕುಟುಕಿದರು.
ಆರ್ ಎಸ್ ಎಸ್ ನವರು 52 ವರ್ಷ ಬಳಿಕ ರಾಷ್ಟ್ರಧ್ವಜ ಹಾರಿಸಿದರು.2002ರಲ್ಲಿ ರಾಷ್ಟ್ರ ಧ್ವಜ ಹಾರಿಸಿದ್ರು. ಇಷ್ಟೊಂದು ವರ್ಷ ಯಾಕೆ ಬೇಕಿತ್ತು ಧ್ವಜ ಹಾರಿಸಲು..? ಇದನ್ನು ನಾನು ಹೇಳುತ್ತಿಲ್ಲ, ಆರ್ ಎಸ್ ಎಸ್ ನಾಯಕರು ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ. ಸಂವಿಧಾನದ ಬಗ್ಗೆ ಬಿಜೆಪಿ,ಆರ್ ಎಸ್ ಎಸ್ ಗೆ ನಂಬಿಕೆಯಿಲ್ಲ. ಧ್ವಜದ ಬಗ್ಗೆ ಅವರಿಗೆ ನಂಬಿಕೆಯಿಲ್ಲ. ಆರ್ ಎಸ್ ಎಸ್ ನ ಯಾರೊಬ್ಬರೂ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಗಿಲ್ಲ.ಯಾರೊಬ್ಬರೂ ಸ್ವತಂತ್ರ ಹೋರಾಟದಲ್ಲಿ ಸತ್ತಿಲ್ಲ. ದೇಶಕ್ಕೆ ಆರ್ ಎಸ್ ಎಸ್, ಬಿಜೆಪಿ ಕೊಡುಗೆ ಏನು ಇಲ್ಲ
ನಮ್ಮ ಕಾಂಗ್ರೆಸ್ ಪೂರ್ವಜರು ಸ್ವತಂತ್ರ ತಂದಿದ್ದು. ಸಂವಿಧಾನ,ಧ್ವಜ, ದೇಶ ನಿರ್ಮಾಣ ಮಾಡಿದ್ದು. ದೇಶಕ್ಕೆ ಯಾವುದೇ ಕೊಡುಗೆ ಕೊಡದೆ ಇರುವವರು ಇವತ್ತು ಮಾತನಾಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಬಿಜೆಪಿ ದೇಶಭಕ್ತಿ ಚುನಾವಣೆಗೆ ಮಾತ್ರ ಸಿಮಿತ. ಶಾಸಕ ಯತ್ನಾಳ್ ಬಾಯಿಗೆ ಬಂದಂತೆ ಮಾತನಾಡ್ತಾರೆ. ಕಟೀಲ್ ಪರಿಸ್ಥಿತಿ ನೋಡಿದ್ರೆ ಅಯ್ಯೋ ಅನಿಸುತ್ತೆ. ಬಿಜೆಪಿ ಅಧ್ಯಕ್ಷರಾಗಿ ಇನ್ನೂ ಒಂದು ನೋಟೀಸ್ ಕೊಟ್ಟಿಲ್ಲ. ಈಶ್ವರಪ್ಪ, ಯತ್ನಾಳಗೆ ಮೊದಲು ನೋಟೀಸ್ ನೀಡಿ. ಈಶ್ವರಪ್ಪ ರನ್ನು ಸಚಿವಸ್ಥಾನದಿಂದ ವಜಾ ಮಾಡಿ ಎಂದು ಆಗ್ರಹಿಸಿದರು.
ಇವತ್ತು ಸಂವಿಧಾನ, ಧ್ವಜ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ನಾಳೆ ದೇಶದ ಹೆಸರು ಬದಲಾಯಿಸುತ್ತಾರೆ ಎಂದು ಕಿಡಿಕಾರಿದರು.
Key words: Congress-MLA-Priyank Kharge- Demand