ಬೆಂಗಳೂರು,ಮಾರ್ಚ್,5,2021(www.justkannada.in): ವಿಧಾನಸಭೆ ಕಲಾಪದಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ ಮಾಡಿದ ಹಿನ್ನೆಲೆ ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ಅವರನ್ನ ಸದನದಿಂದ ಒಂದು ವಾರ ಅಮಾನತು ಮಾಡಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಿರ್ಧಾರವನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಸ್ಪೀಕರ್ ಅವರ ಏಕಪಕ್ಷೀಯ ನಿರ್ಧಾರವನ್ನ ಅಸಂವಿಧಾನಿಕವೆಂದು ಟೀಕಿಸಿದ್ದಾರೆ. ಸದನದಲ್ಲಿ ಸಂಗಮೇಶ್ ಅವರಿಗಾಗಲೀ, ಪ್ರತಿಪಕ್ಷ ನಾಯಕ ನನಗಾಗಲೀ ಮಾತನಾಡಲು ಅವಕಾಶ ನೀಡಿಲ್ಲ. ಸ್ಪೀಕರ್ ಅವರ ಏಕಪಕ್ಷೀಯ ನಿರ್ಧಾರ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಹಾಗೆಯೇ ಕೂಡಲೇ ಸದನದಿಂದ ಶಾಸಕ ಸಂಗಮೇಶ್ ರನ್ನ ವಜಾಗೊಳಿಸಿರುವ ನಿರ್ಣಯವನ್ನು ಹಿಂಪಡೆಯಬೇಕು ಎಂದು ಟ್ವಿಟ್ಟರ್ ನಲ್ಲಿ ಸ್ಪೀಕರ್ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಿರ್ಣಯ ಹಿಂಪಡೆಯುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
Key words: congress-MLA –Sangamesh-suspend-session-former CM- Siddaramaiah -condemns Speaker