ಕಾಂಗ್ರೆಸ್ ನವರಿಗೆ  ಬಹುಸಂಖ್ಯಾತರು ಬೇಕಿಲ್ಲ: ಅಲ್ಪಸಂಖ್ಯಾತರ ಬಗ್ಗೆ ಹೆಚ್ಚು ಕಾಳಜಿ- ಸಚಿವ ಆರ್.ಅಶೋಕ್.

ಬೆಳಗಾವಿ,ಡಿಸೆಂಬರ್,13,2021(www.justkannada.in): ಕಾಂಗ್ರೆಸ್ ನವರಿಗೆ  ಬಹುಸಂಖ್ಯಾತರು ಬೇಕಿಲ್ಲ: ಅಲ್ಪಸಂಖ್ಯಾತರ ಬಗ್ಗೆ ಹೆಚ್ಚು ಕಾಳಜಿ ಇದೆ.ಅವರ ಪರಂಪರಯೇ ಆ ರೀತಿಯಾಗಿ ಆಗಿಬಿಟ್ಟಿದೆ. ಅದ್ಧರಿಂದಲೇ ದೇಶದಲ್ಲಿ ಕಾಂಗ್ರೆಸ್ ಮೂಲೆಗುಂಪಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದರು.

ಬೆಳಗಾವಿಯಲ್ಲಿ  ಇಂದಿನಿಂದ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಈ ಮಧ್ಯೆ, ಸಿಎಂ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್. ಅಶೋಕ್ ಒಟ್ಟಿಗೆ ಬೆಳಗಾವಿಗೆ ವಿಮಾನದಲ್ಲಿ ಇಂದು ಬೆಳಗ್ಗೆ ಆಗಮಿಸಿದರು.

ಬೆಳಗಾವಿಗೆ ಬಂದಿಳಿಯುತ್ತಿದ್ದಂತೆ ಮಾಧ್ಯಮಗಳ ಜತೆ ಮಾತನಾಡಿದ ಕಂದಾಯ ಸಚಿವ ಅಶೋಕ್,ಕಾಂಗ್ರೆಸ್ ಒಂದು ಸಮುದಾಯದ ಪರವಾಗಿದೆ. ಬಹುಸಂಖ್ಯಾತರ ಬಗ್ಗೆ ಕಾಳಜಿಯಿಲ್ಲ. ಅಲ್ಪಸಂಖ್ಯಾತರ ಬಗ್ಗೆ ಕಾಳಜಿಯಿದೆ. ಎಲ್ಲರ ಬಗ್ಗೆ ಕಾಂಗ್ರೆಸ್ ಗೆ ಕಾಳಜಿಯಿರಬೇಕು. ಈಗಾಗಲೇ ಸಂವಿಧಾನದಲ್ಲಿ ಇದು (ಮತಾಂತರ ನಿಷೇದ) ಇದೆ. ಇನ್ನಷ್ಟು ಕಠಿಣ ಕಾನೂನು‌ ತರುತ್ತಿದ್ದೇವೆ ಎಂದು ಹೇಳಿದರು.

Key words: Congress – More- concerned- about –minorities-Minister -R. Ashok

ENGLISH SUMMARY…

“Cong. people are not bothered about majority”: They are only concerned about the minorities – Minister R. Ashok
Belagavi, December 13, 2021 (www.justkannada.in): The Congress party and the congress leaders are not bothered about the majority in this country. They always are concerned only about the minorities. They talk only about them. That is why the Congress party has been cornered today,” opined Revenue Minister R. Ashok.
The winter session of the cabinet commenced today in Belagavi. The Chief Minister Basavaraj Bommai and Revenue Minister R. Ashok traveled to Belagavi together in the same flight and arrived at Belagavi.
Addressing the press persons soon after arriving at Belagavi, the Revenue Minister Ra. Ashok said that Congress is supporting only one community they are not worried about the majority. “They are worried only about the minorities, whereas they should think about everyone. The anti-conversion law already exists in our constitution. We are just making it more stringent that’s all,” he said.
Keywords: Revenue Minister R. Ashok/ winter session/ anti-conversion bill/ Congress party/ minorities