ಮೈಸೂರು, ಸೆ.09, 2021 : (www.justkannada.in news): ಸುಪ್ರೀಕೋರ್ಟ್ ಆದೇಶದನ್ವಯ ಅನಧಿಕೃತ ದೇವಾಲಯ, ಚರ್ಚ್ ಹಾಗೂ ಮಸೀದಿಗಳ ತೆರವು ನಡೆಯುತ್ತಿದದ್ದು, ಈ ಸಂಬಂಧ ಬಿಜೆಪಿ ಸಂಸದ ಪ್ರತಾಪ್ ಸಿಂಹ ಕೋಮು ಪ್ರಚೋದನೆ ಹೇಳಿಕೆ ನೀಡಿ ಜನತೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿ ಟೀಕಾಪ್ರಹಾರ ನಡೆಸಿದರು.
ಮೈಸೂರಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ಸಂಬಂದ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ವರದಿ ಬಿಡುಗಡೆ ಮಾಡಿ , ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖಂಡರು ಮಾತನಾಡಿದರು.
ವಕ್ತಾರ ಎಂ. ಲಕ್ಷ್ಮಣ್ ಆರೋಪ :
ಅನಧಿಕೃತ ದೇವಾಲಯಗಳ ತೆರವು ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶವನ್ನು ನೋಡಿ ಪ್ರತಾಪ್ ಸಿಂಹ. ಪ್ರತಾಪ್ ಸಿಂಹ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದೀರಾ.? ಜಿಲ್ಲಾಧಿಕಾರಿಗಳಿಗೆ ದಮ್ಕಿ ಹಾಕುತ್ತಿದ್ದೀರಾ..? ಹಿಂದೂ ಮಸ್ಲೀಂ ಎಲ್ಲಾ ಈ ದೇಶದ ಮಕ್ಕಳು. ಅರಸು ರಸ್ತೆ ದರ್ಗಾ ಸುಪ್ರೀಂ ಕೋರ್ಟ್ ಲಿ ಕೇಸ್ ಇರುವುದು ಗೊತ್ತಿಲ್ವೇನಪ್ಪಾ ಪ್ರತಾಪ್ ಸಿಂಹ.? ಕೋಮು ಗಲಭೆ ಪ್ರಚೋದನೆ ಮಾಡುವ ಕೆಲಸ ಪ್ರತಾಪ ಸಿಂಹ ಮಾಡುತ್ತಿದ್ದಾರೆ. ಜಿಲ್ಲಾ ದಂಡಾಧಿಕಾರಿಗೆ ತೊಡೆ ನಡುಗುತ್ತಾ ಅಂತ ಕೇಳ್ತಾ ಇದ್ದಾರೆ. ಏನು ಇದರ ಅರ್ಥ.
ತೊಡೆ ನುಡುಗುತ್ತಾ ಹೇಳಿಕೆಗೆ ವಾಸು ಆಕ್ಷೇಪ :
ಯಾವ ಅನಧಿಕೃತ ಮಸೀದಿ ದರ್ಗಾ, ದೇವಸ್ಥಾನ ಇದೆ ಎಂಬುದರ ಕುರಿತು ಸುಪ್ರೀಂ ಕೋರ್ಟ್ ಆದೇಶ ಇದೆ. ಅದನ್ನ ತೆರವು ಮಾಡಿ. ಸಂಸದರು ನೆನ್ನೆ ಹೇಳಿರುವ ಹೇಳಿಕೆ ಸರಿಯಲ್ಲ. ಕೆಡಿಪಿ ಸಭೆಗೂ ಇದಕ್ಕೂ ಏನು ಸಂಬಂಧ. ಆದೇಶದಂತೆ ಮಸೀದಿ ಇದ್ರೂ, ದೇವಸ್ಥಾನ ಇದ್ರೂ ತೆಗೆಯಿರಿ. ಪಟ್ಟಿ ಎಲ್ಲರ ಕೈಯಲ್ಲೂ ಇದೆ. ದೇವರಾಜ ಅರಸು ರಸ್ತೆ ದರ್ಗಾ ವಿಚಾರ ಕೋರ್ಟ್ ನಲ್ಲಿ ಇದೆ. ಕೋಮು ಭಾವನೆ ಕೆರಳಿಸುವ ಕೆಲಸ ಯಾರೇ ಮಾಡಿದರೂ ಅದು ಅಪರಾಧ. ಕೋರ್ಟ್ ಆದೇಶ ಪಾಲಿಸಕ್ಕೆ ನಮ್ಮ ಯಾವುದೇ ತಕರಾರು ಇಲ್ಲ.
ಶಾಸಕ ತನ್ವೀರ್ ಸೇಠ್ ಗರಂ.
ನೀವೂ ಧಮ್ಕಿ ಹಾಕಿದರೆ ನಾವು ಹೆದರಲ್ಲ. ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ ಪ್ರತಾಪ್ ಸಿಂಹ ಅವರೇ. ಇಂತಹ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಆದರೆ ಇದೆಲ್ಲವು ಕಾನೂನಿನ ಮೂಲಕ ಆಗಬೇಕು. ಜಿಲ್ಲಾಧಿಕಾರಿಗಳಿಗೆ ಧಮ್ಕಿ ಹಾಕಿದ್ದೀರಾ ಇದು ಸರಿಯಲ್ಲ. ಓರ್ವ ಜಿಲ್ಲಾ ದಂಡಾಧಿಕಾರಿಗಳಿಗೆ ಈ ರೀತಿ ಧಮ್ಕಿ ಸರಿಯಲ್ಲ. ಮೈಸೂರಿನಲ್ಲಿ ಪ್ರತಾಪ್ ಸಿಂಹ ಹೇಳಿಕೆಗೆ ತನ್ವೀರ್ ಸೇಠ್ ಎಚ್ಚರಿಕೆ. ಪ್ರಚೋದನೆ ಕೊಡುವುದು ಯಾರಿಗು ಒಳ್ಳೆಯದಲ್ಲ. ಮೈಸೂರಿನ ಅರಸು ರಸ್ತೆಯ ದರ್ಗಾ ಮೊದಲು ಬಂತಾ? ರಸ್ತೆ ಮೊದಲು ಬಂತ. ಆ ದರ್ಗಾ ಇದ್ದದ್ದು ಮನೆಯಲ್ಲಿ- ಬಳಿಕ ಅಲ್ಲಿ ರಸ್ತೆ ಆಗಿದೆ. ಸದ್ಯ ಅದು ಈಗ ಕೋರ್ಟ್‌ನಲ್ಲಿ ಇದೆ. ಇದನ್ನ ಕೋರ್ಟ್ ಬಗೆಹರಿಸುತ್ತೆ, ಇದರಲ್ಲಿ ರಾಜಕೀಯ ಬೇಡ.
ಸೋಮಶೇಖರ್ ಆಕ್ರೋಶ :
ಹಿಂದೂ ಮುಸ್ಲಿಂ ನಡುವೆ ಬೆಂಕಿ ಹಚ್ಚಿ ಮತ ಪಡೆದವರು ಬಿಜೆಪಿಯವರು. ಬೆಲೆ ಏರಿಕೆ ಮಾಡುತ್ತಿದ್ದಾರೆ, ದೇಶ ಮಾರುತ್ತಿದ್ದಾರೆ. ಈಗಿನ ಕಾಲದಲ್ಲಿ ಪಾಲಿಕೆಯ ಕಟ್ಟಡ 2 ತಿಂಗಳಿಗೆ ಬಾಡಿಗೆ ಕೊಟ್ಟರೆ ಬಿಡಿಸಿಕೊಳ್ಳೊದು ಕಷ್ಟ. ಅಂತಹದರಲ್ಲಿ ಖಾಸಗಿಯವರಿಗೆ 40 ವರ್ಷಕ್ಕೆ ಗುತ್ತಿಗೆ ನೀಡಿದ್ರೆ. ಅದನ್ನ ನಾವು ನಿಜವಾಗಲು ಬಿಡಿಸಿಕೊಳ್ಳಲು ಆಗುತ್ತಾ? ಪ್ರತಾಪ್ ಸಿಂಹ ಅವರು ಈ ರೀತಿ ಹೇಳಿಕೆ ನೀಡುವ ಮೂಲಕ ಬೆಂಕಿ ಹಚ್ಚಬಾರದು.
key words : congress-mysore-mp-prathap-simha-allegation-temple