ಶಿವಮೊಗ್ಗ,ಮಾರ್ಚ್,18,2024(www.justkannada.in): ಬಿಜೆಪಿ ಬಡವರ ಕಲ್ಯಾಣ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದೆ. ಆದರೆ ಕಾಂಗ್ರೆಸ್ ಬಳಿ ಅಭಿವೃದ್ದಿ ಮಾಡುವ ಅಜೆಂಡಾ ಇಲ್ಲ. ರಾಜ್ಯದಲ್ಲಿ ಸೂಪರ್ ಸಿಎಂ, ಶ್ಯಾಡೋ ಸಿಎಂ ಆಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಕಾಸ ಕರ್ನಾಟಕ ಬಡತನ ನಿರ್ಮೂಲನೆ ಮಾಡಲು, ಭ್ರಷ್ಟಾಚಾರ ತೊಲಗಿಸಲು 400ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸಬೇಕು. ರಾಜ್ಯದಲ್ಲಿ 28 ಬಿಜೆಪಿ ಅಭ್ಯರ್ಥಿಗಳನ್ನ ನೀವು ಗೆಲ್ಲಿಸಿ ದೆಹಲಿಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಮೂಲ ಮಂತ್ರ ವಿಕಾಸ, ಬಡವರ ಕಲ್ಯಾಣ, ಬಲಿಷ್ಠ ಭಾರತ ನಿರ್ಮಾಣ ಮಾಡೋದೆ ಬಿಜೆಪಿ ಗುರಿ. ವಿಕಸಿತ ಭಾರತಕ್ಕಾಗಿ ವಿಕಸಿತ ಕರ್ನಾಟಕಕ್ಕಾಗಿ ಹಾಗೂ ಭ್ರಷ್ಟಾಚಾರಿಗಳ ವಿರುದ್ದ ಹೋರಾಡಲು 400 ಸ್ಥಾನ ಗೆಲ್ಲಬೇಕು. ಕಾಂಗ್ರೆಸ್ ಬಳಿ ಅಭಿವೃದ್ದಿ ಮಾಡೋ ಅಜೆಂಡಾ ಇಲ್ಲ ಭ್ರಷ್ಟಾಚಾರದಲ್ಲಿ ಮುಳುಗಿದವರು ಇಂದು ಒಂದಾಗಿದ್ದಾರೆ. ಜೂನ್ 4 ರಂದು ಬಿಜೆಪಿ 400 ಕ್ಷೇತ್ರಗಳನ್ನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ 40 ಲಕ್ಷಕ್ಕೂ ಅಧಿಕ ಮನೆಗಳಿಗೆ ಗ್ಯಾಸ್ ಸಂಪರ್ಕ ನೀಡಲಾಗಿದೆ. ದೇಶದ ಪ್ರತಿ ಹಳ್ಳಿಗೂ ಇಂಟರ್ ನೆಟ್ ಸೌಲಭ್ಯ ಕಲ್ಪಿಸಲಾಗಿದೆ. ಬಡವರ ಶ್ರೇಯೋಭಿವೃದ್ದಿಗೆ ಬಿಜೆಪಿ ಶ್ರಮಿಸುತ್ತಿದೆ ಎಂದು ಮೋದಿ ಹೇಳಿದರು.
ದೆಹಲಿ ಕಾಂಗ್ರೆಸ್ ನಾಯಕರಿಗೆ ಕರ್ನಾಟಕ ಎಟಿಎಂ ಆಗಿದೆ. ನಿನ್ನೆ ಮುಂಬೈನಲ್ಲಿ ಕಾಂಗ್ರೆಸ್ ಸಭೆಯಲ್ಲಿ ಒಂದು ನಿರ್ಣಯ ಮಾಡಿದ್ದಾರೆ. ಹಿಂದೂ ಸಮಾಜದ ಶಕ್ತಿಯನ್ನ ನಿರ್ಮೂಲನೆ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ ನಾವು ನಮ್ಮ ಶಕ್ತಿ ಹೆಚ್ಚಿಸಬೇಕಿದೆ ಎಂದರು.
ಕುವೆಂಪು ಕರ್ನಾಟಕದ ಒಂದು ಶಕ್ತಿ. ಮಂತ್ರ ಕಣ ತಾಯಿ ಕಣ ದೇವಿ ಕಣ ಅಂತ ಕುವೆಂಪು ಅವರು ಹೇಳಿದ್ದರು. ಈ ಮೂಲಕ ಮಹಿಳೆಯರ ಶಕ್ತಿ ಮತ್ತು ಮಹತ್ವವನ್ನು ಕುವೆಂಪು ಸಾರಿದ್ದರು ಎಂದು ತಿಳಿಸಿದರು. ಇಂಡಿಯಾ ಮೈತ್ರಿಕೂಟದ ಜನ ಶಕ್ತಿ ನಾಶಕ್ಕೆ ಮುಂದಾಗಿದ್ದಾರೆ. ಭಾರತದ ಮಹಿಳೆಯರು ಮಕ್ಕಳಿಗೆ ಅಪಮಾನ ಮಾಡುತ್ತಿದ್ದಾರೆ. ನಾರಿಶಕ್ತಿ ಆಶೀರ್ವಾದ ನಮ್ಮ ಮೇಲೆ ಇದೆ ಎಂದು ಪ್ರಧಾನಿ ಮೋದಿ ನುಡಿದರು.
Key words: Congress – no development- Super CM- Shadow CM – state – PM- Modi