ಧಾರವಾಡ,ಜುಲೈ,1,2023(www.justkannada.in): ಪಂಚೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರ ನಡೆಯುತ್ತಿದ್ದು, ಇದೀಗ ಕಾಂಗ್ರೆಸ್ ನಾಯಕರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿತಿರುಗೇಟು ನೀಡಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಪಕ್ಷದ ಲೋ ಲೆವೆಲ್ ಲಾಂಗ್ವೇಜ್ ಇದು. ಆದರೆ ನಾನು ಭಾರತ ಸರ್ಕಾರದ ಮಂತ್ರಿಯಾಗಿ ಆ ಲೆವೆಲ್ ಗೆ ಇಳಿದು ಮಾತಾಡಲ್ಲ. ಆದರೆ ಸಿದ್ದರಾಮಯ್ಯನವರೂ ಸಹ ಲುಂಗಿ ಲೀಡರ್ ಅನ್ನೋದನ್ನ ಕಾಂಗ್ರೆಸ್ ಪಕ್ಷ ಮರೆಯಬಾರದು. ನಾವೂ ಸಹ ಅದೇ ಭಾಷೆಯಲ್ಲಿ ಉತ್ತರ ಕೊಡಬಹುದು. ಆದರೆ ಆ ಲೆವೆಲ್ ಗೆ ಇಳಿಯಲ್ಲ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ ಪಕ್ಷ ಬಳಸಿರುವ ಪಂಚೆ ಭಾಷೆಗೆ ನನ್ನ ಬಳಿ ಉತ್ತರ ಇಲ್ಲ ಅಂತ ಅಲ್ಲ, ನನ್ನ ಬಾಯಲ್ಲಿ ಉತ್ತರ ಇದೆ, ಆದರೆ ಆ ರೀತಿಯ ಅಸಭ್ಯ ಭಾಷೆ ಬಳಸೋದು ಯಾವ ಕಾಲಕ್ಕೂ ಸರಿ ಅಲ್ಲ. ನೇರವಾಗಿ ರಾಜಕಾರಣದಲ್ಲಿ ಡೇ ಟು ಡೇ ಬೇಸಿಸ್ ನಲ್ಲಿ ಸಂಬಂಧವಿಟ್ಟುಕೊಳ್ಳದ, ಸಂಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳ ಬಗ್ಗೆ ಈ ರೀತಿಯ ಭಾಷೆ ಬಳಸಿದ ಕಾಂಗ್ರೆಸ್ ಪಕ್ಷಕ್ಕೆ ಜನರೇ ಉತ್ತರ ಕೊಡ್ತಾರೆ ಎಂದು ಪ್ರಹ್ಲಾದ್ ಜೋಶಿ ಕಿಡಿಕಾರಿದರು.
ಚುವಾವಣೆಯ ಸಂದರ್ಭದಲ್ಲಿ ಬೇಷರತ್ ಎಂಬಂತೆ ಬಿಂಬಿಸಿ ಭಾಗ್ಯಗಳನ್ನು ಘೋಷಿಸಿದ ಕಾಂಗ್ರೆಸ್ ಇವತ್ತು ಉಲ್ಟಾ ಹೊಡೆಯುತ್ತಿದೆ. ಇದರಿಂದ ಕರ್ನಾಟಕದ ಜನತೆ ಕೂಡ ತೀವ್ರ ಅಸಮಾಧಾನಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಈ ದುರಹಂಕಾರ ಮತ್ತು ದುರಾಡಳಿತವನ್ನ ವಿರೋಧಿಸಿ ನಾವು ಜುಲೈ 4 ರಂದು ಪ್ರತಿಭಟನೆ ಮಾಡಲಿದ್ದೇವೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.
Key words: Congress – not- forget -CM Siddaramaiah – Lungi leader-Union Minister- Prahlad Joshi