ಬೆಳಗಾವಿ,ಡಿಸೆಂಬರ್,13,2023(www.justkannada.in): ಜಾತಿ ಜನಗಣತಿ ಕುರಿತು ಎಐಸಿಸಿ ಅಧ್ಯಕ್ಷರು ಒಂದು ರೀತಿ ಕೆಪಿಸಿಸಿ ಅಧ್ಯಕ್ಷರು ಮತ್ತೊಂದು ರೀತಿ ಹೇಳಿಕೆ ಕೊಡುತ್ತಾರೆ. ಕಾಂಗ್ರೆಸ್ ಈಗ ಒಡೆದ ಮನೆಯಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್. ಅಶೋಕ್, ಜಾತಿಗಣತಿ ಬಗ್ಗೆ ರಾಜ್ಯಸಭೆಯಲ್ಲಿ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೇ ವಿರೋಧ ಮಾಡಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ಅವರು, ನಾನು ವಿರೋಧ ವ್ಯಕ್ತಪಡಿಸಿಲ್ಲ. ವೈಜ್ಞಾನಿಕವಾಗಿ ನಡೆಯಬೇಕು ಎಂದಿದ್ದೆ ಎನ್ನುತ್ತಾರೆ. ಹೀಗೆ ವರದಿ ಬಗ್ಗೆಯೇ ಎಐಸಿಸಿ ಅಧ್ಯಕ್ಷ ಮತ್ತು ಕೆಪಿಸಿಸಿ ಅಧ್ಯಕ್ಷರ ನಡುವೇ ಗೊಂದಲಗಳಿದೆ ಎಂದು ಲೇವಡಿ ಮಾಡಿದರು.
ಉತ್ತರ ಕರ್ನಾಟಕ ಸಮಸ್ಯೆ ಪರಿಹಾರ ಕಂಡುಕೊಳ್ಳಲು, ಸ್ಟ್ಯಾಂಪ್ ಬೆಲೆ ಹೆಚ್ಚಳ ಮಾಡೋಕೆ, ಮನೆಗಳ ತೆರಿಗೆ ಹೆಚ್ಚಳ ಮಾಡೋಕೆ ಅವೇಶನ ಕರೆದಿದ್ದಾರೆ. ಈ ಸರ್ಕಾರಕ್ಕೆ ಹೇಳೋರಿಲ್ಲ, ಕೇಳೋರಿಲ್ಲದಂತಾಗಿದೆ. ಪೊಲೀಸರೇ ರೈತರ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ ಇದನ್ನು ಯಾರೂ ಕೇಳೋರು ಇಲ್ಲ ಎಂದು ಕಿಡಿಕಾರಿದರು.
Key words: Congress – now – broken house- opposition leader- R. Ashok