ಚಾಮರಾಜನಗರ,ಆಗಸ್ಟ್,26,2023(www.justkannada.in): ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತ ಮಾಡುವ ಇಚ್ಛೇ ಕಾಂಗ್ರೆಸ್ ಪಕ್ಷದಲ್ಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಬರುವವರು ಪಕ್ಷದ ಮೇಲೆ ನಂಬಿಕೆ ಇಟ್ಟು ಯಾರೇ ಬಂದರೂ ಸ್ವಾಗತಿಸುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.
ಚಾಮರಾಜನಗರ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿರುವ ಹೆಲಿಪ್ಯಾಡ್ ನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಉಪಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಚಾಮರಾಜನಗರಕ್ಕೆ ಆಗಮಿಸಿದ್ದೇನೆ. ಹಿಂದುಳಿದ ಜಿಲ್ಲೆಯಾಗಿರುವ ಚಾಮರಾಜನಗರದಲ್ಲಿ ಇಲ್ಲಿರುವ ಕೈಗಾರಿಕಾ ವಲಯಕ್ಕೆ ಉತ್ತೇಜನ ನೀಡಲು, ಸೋಲಾರ್ ಬಾಟರಿ ಹೊಸ ಪ್ಲಾಂಟ್ ಗೆ ಚಾಲನೆ ನೀಡುತ್ತಿದ್ದೇವೆ ಎಂದರು.
ಈ ಹಿಂದೆ ಸಿದ್ದರಾಮಯ್ಯರವರ ನೇತೃತ್ವದ ಸರ್ಕಾರದಲ್ಲಿ ನಾನು ಇಂಧನ ಸಚಿವನಾಗಿದ್ದಾಗ ಬಹಳಷ್ಟು ಸೋಲಾರ್ ಪಾರ್ಕ್ ಮಾಡಿದ್ದೇನೆ. ಅದು ಇಡೀ ವಿಶ್ವದ ಗಮನ ಸೆಳೆದಿದೆ. ದೇಶದ ಎಲ್ಲಾ ಭಾಗದಲ್ಲೂ ಸೋಲಾರ್ ಪಾರ್ಕ್ ಬಗ್ಗೆ ಒಪ್ಪಿಕೊಂಡಿದೆ ಸೋಲಾರ್ ಪಾರ್ಕ್ ನಿರ್ಮಾಣದಲ್ಲಿ ಕರ್ನಾಟಕ ದೇಶಕ್ಕೆ ಮಾದರಿಯಾಗಿದೆ. ಸೂರ್ಯನ ಬೆಳಕಿನ ಸಂಗ್ರಹಣೆಯಿಂದ ಬ್ಯಾಟರಿ ಉತ್ಪಾದನೆಗೆ ಖಾಸಗಿ ಸಂಸ್ಥೆಯವರು 2 ಸಾವಿರ ಕೋಟಿ ಬಂಡವಾಳ ಹೂಡಿದ್ದಾರೆ. ಅವರಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಡಲು ಸರ್ಕಾರ ಬದ್ದವಾಗಿದೆ ಎಂದು ತಿಳಿಸಿದರು.
ಕೋವಿಡ್ ಆಕ್ಸಿಜನ್ ದುರಂತ ದಲ್ಲಿ ಸಾವನ್ನಪ್ಪಿದ ಘಟನೆ ತನಿಖೆ ನಡೆಯುತ್ತಿದೆ, ಮೃತಪಟ್ಟ ಕುಟುಂಬಗಳಿಗೆ ನ್ಯಾಯ ಸಿಗಲಿದೆ ಎಂದು ಹೇಳಿದ ಡಿ ಕೆ ಶಿವಕುಮಾರ್, ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಆಗುತ್ತಿಲ್ಲ, ಪ್ರಧಾನಮಂತ್ರಿಗಳ ಇಂದಿನ ಬೆಂಗಳೂರಿನ ಭೇಟಿ ದಿಢೀರ್ ಆಗಿದ್ದು, ಅವರು ಶಿಷ್ಠಾಚಾರದ ಬಗ್ಗೆ ತಿಳಿಸಿದ್ದಾರೆ. ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಯಾರನ್ನು ಶಿಷ್ಠಾಚಾರಕ್ಕೆ ಕರೆದಿದ್ದಾರೆ ಎನ್ನುವ ಮಾಹಿತಿ ರಾಜ್ಯ ಬಿಜೆಪಿ ನಾಯಕರಿಗಿಲ್ಲ ಎಂದು ಕಿಡಿಕಾರಿದರು.
Key words: Congress party- does -not -want – operation – DCM -DK Shivakumar