ಚಿಕ್ಕೋಡಿ,ಜನವರಿ,27,2021(www.justkannada.in): ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ನಿನ್ನೆ ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
ಸರಕಾರಕ್ಕೆ ಕೆಟ್ಟು ಹೆಸರು ತರಲು ಕಾಂಗ್ರೆಸ್ ರೈತರನ್ನು ಪ್ರಚೋದಿಸುತ್ತಿದೆ. ಸ್ವಾತಂತ್ರ್ಯ ಬಂದ ನಂತರ ಎಂದೂ ಈ ರೀತಿ ರೈತರು ಪ್ರತಿಭಟನೆ ಮಾಡಿಲ್ಲ. ಐದು ರಾಜ್ಯದ ಚುನಾವಣಾ ಹಿನ್ನೆಲೆ ಕಾಂಗ್ರೆಸ್ ಈ ರೀತಿ ರೈತರನ್ನು ಪ್ರಚೋದಿಸುತ್ತಿದೆ ಎಂದು ಸಚಿವ ಶ್ರೀರಾಮುಲು ಆರೋಪಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹಂಚನಾಳ ಗ್ರಾಮದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಚುನಾವಣಾ ಗೆಲ್ಲಲು ಕಾಂಗ್ರೆಸ್ ಪಕ್ಷ ರೈತರ ಬೆಂಬಲ ಪಡೆಯಲು ಈ ರೀತಿ ಪ್ರಚೋದನೆ ನೀಡಿ ಚುನಾವಣೆ ಗೆಲ್ಲಲು ಷಡ್ಯಂತ್ರ ಮಾಡುತ್ತಿದೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಧೂಳಿಪಟವಾಗುತ್ತಿದೆ. ಕಾಂಗ್ರೆಸ್ ನಾಯಕರು ನಿರುದ್ಯೋಗಿಗಳಾಗಿದ್ದಾರೆ, ಹತಾಶೆಯಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಹಾಗೆಯೇ ನಿನ್ನೆಯ ದೆಹಲಿ ರೈತರ ಗಲಾಟೆ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ರೈತರ ಜೊತೆ ಹನ್ನೊಂದು ಬಾರಿ ಕೇಂದ್ರ ಸರ್ಕಾರ ಸಭೆ ನಡೆಸಿದೆ. ರೈತರು ಸಮಾಧಾನವಾಗಿದ್ದರು. ಆದರೆ ಕಾಂಗ್ರೆಸ್ ಗೆ ನಿರುದ್ಯೋಗ ಕಾಡುತ್ತಿದೆ ಎಂದು ಸಚಿವ ಶ್ರೀರಾಮುಲು ಲೇವಡಿ ಮಾಡಿದರು.
ENGLISH SUMMARY…
Minister Sriramulu alleges violence in New Delhi was planned by Cong. to bring bad name to BJP govt.
Chikkodi, Jan. 27,2021 (www.justkannada.in): Minister Sriramulu has expressed his ire on Congress party on farmers’ protest turning violent in New Delhi on Republic Day.
He alleged that in fact it is a plan made by the Congress party to bring a bad name to BJP, by provoking the farmers. Farmers’ have never protested on this scale in our country after independence. This is a clear provoking by the Congress party in the wake of elections in five states, he said.
Speaking at the Hanchanala village in Nippani Taluk, Belagavi District today said, “in order to win the elections the Congress party is provoking the farmers in order to get their support, whereas in fact the Congress party is vanishing both at the national and State-levels. The Congress leaders have become jobless and are doing all this out of frustration.”
Keywords: Minister Sriramulu/ Congress party/ provoking farmers/ farmers protest turns violent
Key words: Congress -planning – bad name – government – farmers-Minister-Sriramulu.