ನಾನು ಬದ್ಧತೆ ಇರುವ ವ್ಯಕ್ತಿ. ಕಾಂಗ್ರೆಸ್ ಗೆ ಸೇರುವ ಪ್ರಶ್ನೆಯೇ ಇಲ್ಲ- ಪ್ರತಾಪ್ ಸಿಂಹ

ಮೈಸೂರು,ಡಿಸೆಂಬರ್,30,2024 (www.justkannada.in): ಮೈಸೂರಿನ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವುದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ  ಬೆಂಬಲ ವ್ಯಕ್ತಪಡಿಸಿದ ಬೆನ್ನಲ್ಲೆ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂಬ ಗುಮಾನಿ ಹಬ್ಬಿದ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ನಾನು ಬದ್ಧತೆ ಇರುವ ವ್ಯಕ್ತಿ. ಕಾಂಗ್ರೆಸ್ ಗೆ ಸೇರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಪ್ರತಾಪ್ ಸಿಂಹ, ಕಾಂಗ್ರೆಸ್ ಗೆ ಹೋಗುವ ಅನಿವಾರ್ಯತೆ ನನಗೆ ಇಲ್ಲ. ನಾನು  ಬಕೆಟ್ ಹಿಡಿಯುತ್ತಿದ್ದೇನೆ ಎಂದು.  ಪಕ್ಷದ ಕೆಲವರು ಹೇಳುತ್ತಿದ್ದಾರೆ.  ಮಾತು ಸಭ್ಯತೆ ಮೀರವಬಾರದು ಎಂದು ಸ್ವಪಕ್ಷದ ತಿರುಗೇಟು ನೀಡಿದರು.

ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ದ ಕೆಲಸ ಮಾಡಿದವನು ನಾನು. ನನ್ನ ವಿರುದ್ದ ಸಾಕಷ್ಟು ಕೇಸ್ ಹಾಕಿಸಿದರು. ನಾನು  ಬದ್ಧತೆ ಇರುವ ವ್ಯಕ್ತಿ ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ ಎಂದರು.

ರಸ್ತೆ ಸಿಎಂ ಸಿದ್ದರಾಮಯ್ಯ ಹೆಸರಿಡುವ ವಿಚಾರ  ಪ್ರಿನ್ಸೆಸ್ ರಸ್ತೆ ಅನ್ನೋ ದಾಖಲೆ ಇದ್ದರೇ ಹೆಸರು ಬದಲಾವಣೆ ಬೇಡ. ನಾನು ಹರೀಶ್ ಗೌಡರಿಗೆ ಮನವಿ ಮಾಡುತ್ತೇನೆ ಹೊಸ ಬಡಾವಣೆ ಮಾಡಿ ಸಿದ್ದರಾಮಯ್ಯ ಹೆಸರಿಡಲಿ ಇದನ್ನು ಇಲ್ಲಿಗೆ ನಿಲ್ಲಿಸೋಣ ಎಂದು ಪ್ರತಾಪ್ ಸಿಂಹ ತಿಳಿಸಿದರು.

Key words: no question, joining, Congress, Prathap Simha