ವಿಪಕ್ಷಗಳ ಅವನತಿಗೆ ಮತ್ತು ಈ ಸ್ಥಿತಿಗೆ ಕಾಂಗ್ರೆಸ್ ಮೂಲ ಕಾರಣ- ಲೋಕಸಭೆಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ.

ನವದೆಹಲಿ,ಫೆಬ್ರವರಿ,5,2024(www.justkannada.in): ಮತದಾರರು ವಿಪಕ್ಷಗಳಿಗೆ ಮತ್ತೆ ಸ್ಪಷ್ಟ ಸಂದೇಶ ಕೊಡಲಿದ್ದಾರೆ. ವಿಪಕ್ಷಗಳು ಬಹಳ ವರ್ಷಗಳ ಕಾಲ ವಿಪಕ್ಷ ಸ್ಥಾನದಲ್ಲೇ ಕೂರಲು ಬಯಸುತ್ತಾರೆ. ವಿಪಕ್ಷಗಳ ಅವನತಿಗೆ ಮತ್ತು ವೈಪಲ್ಯಕ್ಕೆ ಕಾಂಗ್ರೆಸ್ ಮೂಲಕಾರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಸಂಸತ್ ಅಧಿವೇಶನ ಲೋಕಸಭೆಯಲ್ಲಿ ಇಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹೊಸ ಸಂಸತ್ ಭವನದಲ್ಲಿ ಹೊಸಪರಂಪರೆ ಆರಂಭವಾಗಿದೆ. ಭಾರತದ ಸ್ವಾತಂತ್ರ್ಯದ ಪ್ರತೀಕವಾಗಿದೆ ಸೆಂಗೋಲ್​. ಸೆಂಗೋಲ್​ ನೋಡಿದ್ದರೆ ಅಲ್ಲಿ ಭಾರತದ ಭವ್ಯತೆ ಕಾಣಸಿಗಲಿದೆ ಎಂದರು.

ಇನ್ನೂ ಹಲವು ವರ್ಷಗಳ ಕಾಲ ವಿರೋಧ ಪಕ್ಷಗಳು ವಿರೋಧ ಪಕ್ಷದ ಸ್ಥಾನದಲ್ಲಿರಲಿವೆ.  ಮುಂದಿನ ಚುನಾವಣಯೆಲ್ಲಿ ನಮಗೆ ಇನ್ನೂ ಉತ್ತಮ ಸ್ಥಾನ ಬರಲಿದೆ.  ಮತದಾರರು ವಿಪಕ್ಷಗಳಿಗೆ ಮತ್ತೆ ಸ್ಪಷ್ಟ ಸಂದೇಶ ಕೊಡಲಿದ್ದಾರೆ. ವಿಪಕ್ಷಗಳ ವೈಪಲ್ಯಕ್ಕೆ ಕಾಂಗ್ರೆಸ್ ಮೂಲಕಾರಣವಾಗಿದೆ.

ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿದೆ. ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ.  ಕಾಂಗ್ರೆಸ ಪಕ್ಷ ನಮ್ಮ ಭಾರತದ ಅಭಿವೃದ್ದಿಗೆ ಮಾರಕ. ಕಾಂಗ್ರೆಸ್ ಉತ್ತಮ ವಿಪಕ್ಷವಾಗಿ ಹೊರಹೊಮ್ಮಿಲ್ಲ. ನಾವು ಹೇಗೆ ಕೆಲಸ ಮಾಡಿದ್ದೇವೋ ಹಾಗೆ ಪ್ರತಿಫಲ ಸಿಗುತ್ತದೆ.  ಮಲ್ಲಿಕಾರ್ಜುನ ಖರ್ಗೆ ಈ ಸದನದಿಂದ ಇನ್ನೊಂದು ಸದನಕ್ಕೆ ಬಂದಿದ್ದಾರೆ. ಗುಲಾಂನಬಿ ಅಜಾದ್ ಪಕ್ಷದಿಂದಲೇ ಹೊರ ಹೋಗಿದ್ದಾರೆ. ಕಾಂಗ್ರೆಸ್ ಗೆ ಉತ್ತಮ ವಿಪಕ್ಷವಾಗಲು ಅವಕಾಶವಿತ್ತು. ಆದರೆ ಕಾಂಗ್ರೆಸ್ ವಿಫಲವಾಗಿದೆ ಎಂದು ಪ್ರಧಾನಿ ಮೋದಿ ಹರಿಹಾಯ್ದರು.

Key words:  main reason – opposition – Congress- PM-Modi-Lok Sabha.