ರಾಹುಲ್ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ: ಸುರ್ಜೇವಾಲಾ ಶ್ರೀನಿವಾಸ್ ಸೇರಿ ಹಲವರು ವಶಕ್ಕೆ.

ನವದೆಹಲಿ,ಜೂನ್,13,2022(www.justkannada.in): ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಿದ್ದು ಮೂವರು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಈ ಮಧ್ಯೆ ರಾಹುಲ್ ಗಾಂಧಿ ವಿಚಾರಣೆ ವಿರೋಧಿಸಿ ನವದೆಹಲಿಯ ಇಡಿ ಕಚೇರಿ ಎದುರು ಕಾಂಗ್ರೆಸ್ ನಾಯಕರು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು  ಹೈಡ್ರಾಮಾವೇ ನಡೆದಿದೆ.  ಪ್ರತಿಭಟನೆಗೆ ಮುಂದಾಗಿ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಸೇರಿ ಹಲವು ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಲಾಲ್ ಬಾಗ್ ಗೇಟ್ ನಿಂದ ಇಡಿ ಕಚೇರಿವರೆಗೆ ಪಾದಯಾತ್ರೆಯಲ್ಲಿ ಆಗಮಿಸಿ ಪ್ರತಿಭಟನೆಗೆ ಮುಂದಾಗಿದ್ದ ಕಾಂಗ್ರೆಸ್ ನಾಯಕರು ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು. ಇನ್ನು ನೂಕಾಟ ತಳ್ಳಾಟದ ವೇಳೆ ಕೈ ಮುಖಂಡ ವೇಣುಗೋಪಾಲ್ ಅಸ್ವಸ್ಥರಾದ ಘಟನೆ ನಡೆಯಿತು.

Key words: Congress-protests-against-Rahul Gandhi- ED- inquiry

ENGLISH SUMMARY….

Cong. protest in Bengaluru condemning Rahul Gandhi’s questioning by ED
New Delhi, June 13, 2022 (www.justkannada.in): Congress leader Rahul Gandhi has appeared before the Enforcement Directorate for questioning over the alleged money laundering in the National Herald case. He is being questioned by three officials.
Several Congress leaders and activists staged a demonstration in front of the Enforcement Directorate (ED) in New Delhi, condemning the questioning of the Congress leader.
In Karnataka also, the Congress leaders took out a demonstration march from the Lalbagh Gate to ED office before the police took them into custody. Congress leader Venugopal is said to have been hurt in the melee.
Keywords: ED/ questioning/ Rahul Gandhi/ demonstration