ಬೆಂಗಳೂರು,ಮಾರ್ಚ್,4,2021(www.justkannada.in): ಒಂದು ದೇಶ, ಒಂದೇ ಚುನಾವಣೆ ಕುರಿತು ವಿಧಾನಸಭೆಯಲ್ಲಿ ಚರ್ಚೆಗೆ ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ವಿರೋಧದ ನಡುವೆ ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಸ್ತಾಪಿಸಿದರು. ವಿಪಕ್ಷಗಳ ವಿರೋಧದ ನಡುವೆ ಚರ್ಚೆ ಆರಂಭವಾಯಿತು. ಚರ್ಚೆಗೆ ವಿರೋಧ ವ್ಯಕ್ತಪಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಯಾವ ನಿಯಮಾವಳಿ ಅಡಿ ತಂದಿದ್ದೀರಿ . ಇದು ಆರ್ ಎಸ್ ಎಸ್ ಅಜೆಂಡಾ ಎಂದು ಘೋಷಣೆ ಕೂಗಿದರು. ಕೂಗಿದರು.
ಈ ವೇಳೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, ನನಗಿರುವ ಅಧಿಕಾರ ವ್ಯಾಪ್ತಿಯಲ್ಲಿ ಚರ್ಚೆಗೆ ಅವಕಾಶ ಕೊಟ್ಟಿದ್ದೇನೆ ಎಂದರು. ಬೇರೆ ಸಿದ್ಧಾಂತವನ್ನಿಟ್ಟುಕೊಂಡು ಇಂತಹ ವಿಚಾರ ಚರ್ಚೆ ಬೇಡ ಸ್ಪೀಕರ್ ವಿಶೇಷಾಧಿಕಾರ ದುರುಪಯೋಗ ಸರಿಯಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಿಡಿಕಾರಿದರು. ನಿಮ್ಮ ಮಾತು ನಿಮ್ಮ ಘನತೆಗೆ ಸರಿ ಹೋಗಲ್ಲ ಎಂದು ಸ್ಪೀಕರ್ ಕಾಗೇರಿ ರಮೇಶ್ ಕುಮಾರ್ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದರು.
ಈ ನಡುವೆ ಕಾಂಗ್ರೆಸ್ ಸದಸ್ಯರು ಸದನದ ಭಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಗದ್ದಲ ಉಂಟಾದ ಹಿನ್ನೆಲೆ ಕಲಾಪವನ್ನ ಸ್ಪೀಕರ್ ಕಾಗೇರಿ 15 ನಿಮಿಷಗಳ ಕಾಲ ಮುಂದೂಡಿದರು.
ENGLISH SUMMARY….
Opposition in LA over discussion on ‘One Nation, One Election’: Cong. protest
Bengaluru, Mar.04, 2021 (www.justkannada.in): Congress members today stepped into the well of the Legislative Assembly and protested against the discussion on ‘One Nation, One Election’ discussion.
However, the speaker Vishveshwar Hegde Kageri proposed the ‘One Nation, One Election’ amidst the opposition by Congress, and the discussion was held. Leader of the Opposition in the Legislative Assembly Siddaramaiah questioned under what rule have they brought this matter and shouted that it is an RSS agenda.
The speaker replied that he has allowed discussing as per his powers. Former speaker Ramesh Kumar expressed his dissatisfaction asking the speaker not to misuse his power by allowing the discussion keeping some other principles in mind. The session was postponed for 15 minutes due to the furor that took place at this juncture.
Keywords: Congress/ Legislative Assembly/ Speaker/ One Nation, One Election Opposed / discussion
Key words: Congress- protests – assembly -against -opposition -one Nation One election