ನವದೆಹಲಿ,ಸೆಪ್ಟಂಬರ್ 2,2020(www.justkannada.in): ಪ್ರಧಾನಿ ಮೋದಿ ನಿರ್ಮಿತ ವಿಪತ್ತುಗಳಿಂದ ದೇಶ ತತ್ತರಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ನಿರ್ಮಿತ ವಿಪತ್ತುಗಳ ಅಡಿಯಲ್ಲಿ ಭಾರತ ತತ್ತರಿಸುತ್ತಿದೆ. ದೇಶದಲ್ಲಿ ಜಿಡಿಪಿ ಕುಸಿತಗೊಂಡಿದೆ. ಮೋದಿಯವರ ಈ ನೀತಿಯಿಂದಾಗಿ 45 ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ ಜಿಡಿಪಿ ಶೇ.-23.9 ರಷ್ಟಕ್ಕೆ ಕುಸಿದಿದೆ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ನೀಡಬೇಕಾದ ಜಿಎಸ್ಟಿ ಹಣ ಪಾವತಿ ಮಾಡಿಲ್ಲ. ದೇಶದಲ್ಲೇ 45 ವರ್ಷಗಳಲ್ಲಿ ಅತ್ಯಂತ ಹೆಚ್ಚು ನಿರುದ್ಯೋಗ ಸಮಸ್ಯೆ ಉಂಟಾಗಿದೆ. 12 ಕೋಟಿ ಉದ್ಯೋಗ ನಷ್ಟವಾಗಿದೆ. ಹಾಗೆಯೇ ರಾಜ್ಯಗಳಿಗೆ ಜಿಎಸ್ ಟಿ ಬಾಕಿ ಇಟ್ಟಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಪ್ರಧಾನಿ ಮೋದಿ ವಿರುದ್ದ ಹರಿಹಾಯ್ದಿದ್ದಾರೆ.
Key words: congress-Rahul Gandhi –outrage-PM- Modi