ಕಾಂಗ್ರೆಸ್ ನ ರಾಜಭವನ ಚಲೋಗೆ ತಡೆ: ಡಿಕೆಶಿ, ಸಿದ್ಧರಾಮಯ್ಯರನ್ನ ವಶಕ್ಕೆ ಪಡೆದ ಪೊಲೀಸರು.

ಬೆಂಗಳೂರು,ಜೂನ್,16,2022(www.justkannada.in): ಇಡಿಯಿಂದ ರಾಹುಲ್ ಗಾಂಧಿ ವಿಚಾರಣೆ ವಿರೋಧಿಸಿ ಇಂದು ಕಾಂಗ್ರೆಸ್ ನಾಯಕರು ಹಮ್ಮಿಕೊಂಡಿದ್ಧ ರಾಜಭವನ ಚಲೋವನ್ನ ಪೊಲೀಸರು ತಡೆದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ , ವಿಪಕ್ಷ ನಾಯಕ ಸಿದ್ಧರಾಮಯ್ಯ ನೃತೃತ್ವದಲ್ಲಿ ಇಂದು ರಾಜಭವನ ಮುತ್ತಿಗೆ ಹಾಕಲು ತೆರಳುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನ ಕ್ವೀನ್ಸ್ ರಸ್ತೆಯಲ್ಲಿ ಪೊಲೀಸರು ತಡೆದರು. ಈ ವೇಳೆ ಸಿದ್ಧರಾಮಯ್ಯ ಮತ್ತು ಡಿಕೆ  ಶಿವಕುಮಾರ್ ಸೇರಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ಪ್ರತಿಭಟನೆಗೆ ಮುಂದಾದರು.

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಿದ್ಧರಾಮಯ್ಯ, ಡಿಕೆಶಿವಕುಮಾರ್, ಶಾಸಕ ಯತೀಂದ್ರ ಸಿದ್ಧರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು.

Key words: Congress –rajbavana chalo-break-DK Shivakumar- Siddaramaiah.

ENGLISH SUMMARY…

Congress Raj Bhavan Chalo prevented: Police take DKS and Siddaramaiah into custody
Bengaluru, June 16, 2022 (www.justkannada.in): The police today stopped the Congress leaders Raj Bhavan Chalo, opposing the ED’s questioning of Congress leader Rahul Gandhi.
The police stopped the Congress jatha led by leaders D.K. Shivakumar and Siddaramaiah on Queen’s road. The leaders sat on the road to protest. They started shouting slogans against the Union Government. The police took Siddaramaiah, D.K. Shivakumar, MLA Yateendra Siddaramaiah, and other Congress leaders into custody.
Keywords: Congress Raj Bhavan chalo/ prevented/ custody