ಬೆಂಗಳೂರು,ಮೇ,24,2023(www.justkannada.in): ಪೊಲೀಸ್ ಇಲಾಖೆಯನ್ನ ಕೇಸರಿಕರಣ ಮಾಡಲು ಬಿಡುವುದಿಲ್ಲ ಎಂದು ಪೊಲೀಸ್ ಇಲಾಖೆ ಸಭೆಯಲ್ಲಿ ಎಚ್ಚರಿಕೆ ನೀಡಿದ್ಧ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಶಾಸಕ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಬಿವೈ ವಿಜಯೇಂದ್ರ,, ಭಾರತದ ತ್ರಿವರ್ಣ ಧ್ವಜ ಕೇಸರಿಯಿಂಧ ಶುರುವಾಗುತ್ತದೆ. ರಾಷ್ಟ್ರೀಯತೆ ಹಾಗೂ ಹನುಮನ ಸಂಕೇತ ಕೇಸರಿ. ಇಂತಹ ಕೇಸರಿ ಬಗ್ಗೆ ಕಾಂಗ್ರೆಸ್ ನವರಿಗೆ ಯಾಕೆ ಕೋಪ. ಕಾಂಗ್ರೆಸ್ ನವರಿಗೆ ಕೇಸರಿ ಮೇಲೆ ಏಕೆ ಕೋಪವೋ ಗೊತ್ತಿಲ್ಲ ಗರಂ ಆದರು.
ಕಾಂಗ್ರೆಸ್ ನವರು ದೇಶದಲ್ಲಿ ಅಧಿಕಾರಕ್ಕೆ ಬಂದಿದ್ದೇವೆಂಬ ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್ ಗೆ ಲೋಕಸಭೆಯಲ್ಲಿ ಜನ ತಕ್ಕ ಉತ್ತರ ಕೊಡಿತ್ತಾರೆ ಎಂದು ಎಚ್ಚರಿಕೆ ನೀಡಿದರು.
Key words: Congress – saffron – MLA-BY Vijayendra.