ಬೆಂಗಳೂರು, ಏಪ್ರಿಲ್, 10, 2024 (www.justkannada.in): ಜೆಡಿಎಸ್-ಬಿಜೆಪಿ ಮೈತ್ರಿ ನಾಯಕರು ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದನ್ನ ಟೀಕಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಕಿಡಿಕಾರಿದ ಮಾಜಿ ಸಚಿವ ಸಿ.ಟಿ ರವಿ ಸನಾತನ ಧರ್ಮ ನಾಶ ಆಗಲು ಬಯಸಿದ್ದು ಕಾಂಗ್ರೆಸ್. ಯಾವ ಮುಖ ಇಟ್ಟುಕೊಂಡು ಮಠಕ್ಕೆ ಭೇಟಿ ನೀಡುತ್ತಾರೆ ಎಂದು ಹರಿಹಾಯ್ದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ ರವಿ, ಸ್ವಾಮೀಜಿಗಳು ಸನಾತನ ಧರ್ಮವನ್ನ ಪ್ರತಿನಿಧಿಸುತ್ತಾರೆ. ನಾವು ದೇಶ ಮತ್ತು ಧರ್ಮದ ಹಿತಕ್ಕಾಗಿ ಮಠಕ್ಕೆ ಭೇಟಿ ನೀಡುತ್ತೇವೆ. ನೀವು ಯಾವ ಮುಖ ಇಟ್ಟುಕೊಂಡು ಮಠಕ್ಕೆ ಭೇಟಿ ನೀಡುತ್ತೀರಿ..? ಸನಾತನ ಧರ್ಮವನ್ನ ಡೆಂಗ್ಯೂ ಮಲೇರಿಯಾಗೆ ಕಾಂಗ್ರೆಸ್ ಪಾಲುದಾರ ಡಿಎಂಕೆ ನಾಯಕ ಹೋಲಿಸಿದ್ರು ಎಂದು ವಾಗ್ದಾಳಿ ನಡೆಸಿದರು.
ಅಂದು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಆಗಿದ್ದು ಹೆಚ್.ಡಿ ಕುಮಾರಸ್ವಾಮಿ, ಹೆಚ್.ಡಿ ದೇವೇಗೌಡರ ಮೇಲಿನ ಗೌರವದಿಂದಲ್ಲ ಬಿಜೆಪಿ ದೂರ ಿಡುವುದಕ್ಕೆ ಅವರು ಮೈತ್ರಿ ಮಾಡಿಕೊಂಡಿದ್ದರು. ಕೆದಕಿದ್ರೆ ಬಹಳಷ್ಟು ಜನರದ್ದು ಹೊರ ಬರುತ್ತದೆ ಎಂದು ಸಿಟಿ ರವಿ ಗುಡುಗಿದರು.
Key words: Congress, Sanatana, CT Ravi