ಬೆಂಗಳೂರು,ಫೆಬ್ರವರಿ,18,2023(www.justkannada.in): ಬಿಜೆಪಿ ಸರ್ಕಾರ ತಾವು ನೀಡಿದ ಭರವಸೆಗಳನ್ನು ಈಡೇರಿಸದ ವಿರುದ್ಧ ತಮ್ಮ ಪ್ರತಿಭಟನೆಯನ್ನು ಪ್ರದರ್ಶಿಸಲು ಕರ್ನಾಟಕ ಕಾಂಗ್ರೆಸ್ ಶಾಸಕರು ನಿನ್ನೆ ವಿಧಾನಸೌಧದ ಒಳಗೆ ಕಿವಿಗೆ ಹೂವುಗಳನ್ನು ಇಟ್ಟು ಪ್ರತಿಭಟನೆ ಮಾಡಿದ ನಂತರ, ಕಾಂಗ್ರೆಸ್ ಈಗ ಬೀದಿಗಿಳಿದು #ಕಿವಿಮೇಲೆಹೂವ ಅಭಿಯಾನವನ್ನು ಪ್ರಾರಂಭಿಸಿದೆ.
ಇಂದು ಬೆಂಗಳೂರು ನಗರ ಮತ್ತು ಮಂಗಳೂರಿನ ಹಲವೆಡೆ ಬಿಜೆಪಿ ಸಾಧನೆಯ ಗೋಡೆಯ ಪೇಂಟಿಂಗ್ಗಳ ಮೇಲ್ಭಾಗದಲ್ಲಿ ‘ಕಿವಿ ಮೇಲೆ ಹೂವ’ ಎಂಬ ಬರಹದ ಪೋಸ್ಟರ್ ಗಳು ಕಾಣಿಸಿಕೊಂಡಿವೆ.
ಬಿಜೆಪಿ ಪೋಸ್ಟರ್ ಮೇಲೆ ಹೂ ಇರುವ ಪೋಸ್ಟರ್ ಅನ್ನು ಕಾಂಗ್ರೆಸ್ ಕಾರ್ಯಕರ್ತರು ಅಂಟಿಸಿದ್ದು, ‘ಸಾಕಪ್ಪ ಸಾಕು ಕಿವಿಮೇಲೆ ಹೂವ’ ಎಂದು ಕಾಂಗ್ರೆಸ್ ಕಾರ್ಯಕರ್ತರು ಫೋಸ್ಟರ್ ಗಳನ್ನು ಅಂಟಿಸಿದ್ದಾರೆ.
2018ರ 90% ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ ಮತ್ತು 2022-2023ರ ಬಜೆಟ್ ನ 56% ರಷ್ಟು ಮಾತ್ರ ಬಳಸಿಕೊಂಡಿದೆ ಎಂದು ಕರ್ನಾಟಕ ಕಾಂಗ್ರೆಸ್ ನಿನ್ನೆ ಬಿಜೆಪಿ ಸರ್ಕಾರವನ್ನು ಟೀಕಿಸಿತ್ತು. ಸಿಎಲ್ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಇತರ ಕಾಂಗ್ರೆಸ್ ಶಾಸಕರು ತಮ್ಮ ಕಿವಿಯ ಮೇಲೆ ಹೂವುಗಳನ್ನು ಇಟ್ಟುಕೊಂಡು ಬಿಜೆಪಿ ಜನರನ್ನು “ಫೂಲ್” ಮಾಡುತ್ತಿದೆ ಲೇವಡಿ ಮಾಡಿದ್ದರು.
Key words: Congress – started -‘Sakappa Saku Kivi mele Huwa- campaign –against- BJP.