ಕೇಂದ್ರ ಸಚಿವ ಡಿವಿ ಸದಾನಂದ ಗೌಡ ತಡೆಯಾಜ್ಞೆ ತಂದ ಬಗ್ಗೆ ಕಾಂಗ್ರೆಸ್ ವ್ಯಂಗ್ಯ.

ಬೆಂಗಳೂರು,ಜುಲೈ,3,2021(www.justkannada.in): ತಮ್ಮ ವಿರುದ್ದ ಮಾಧ್ಯಮಗಳು ಯಾವುದೇ ಮಾನಹಾನಿಕರ ವರದಿ ಮಾಡದಂತೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರು ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದು ಈ ಕುರಿತು ರಾಜ್ಯ ಕಾಂಗ್ರೆಸ್ ಘಟಕ ಟ್ವಿಟ್ಟರ್ ನಲ್ಲಿ ವ್ಯಂಗ್ಯವಾಡಿದೆ.

ಈ ಕುರಿತು ಟ್ವಿಟ್ ಮಾಡಿರುವ ರಾಜ್ಯ ಕಾಂಗ್ರೆಸ್,  ಕಳ್ಳನ ಮನಸು ಹುಳ್ಳುಳ್ಳಗೆ ಎಂಬಂತೆ ಕೇಂದ್ರ ಸಚಿವ ಅವರು ಸಿಡಿ ಬಿಡುಗಡೆಯಾಗದಂತೆ ತಡೆಯಾಜ್ಞೆ ತಂದಿದ್ದಾರೆ, ತಡೆಯಾಜ್ಞೆ ತಂದ ಬಿಜೆಪಿಗರಲ್ಲಿ ಇವರು ಏಳನೆಯವರು! ಬಿಜೆಪಿಯವರಿಗೇ ಏಕೆ ಈ ಪರಿ ಸಿಡಿ ಭಯ ಕಾಡುವುದು ಎಂಬದೇ ಯಕ್ಷಪ್ರಶ್ನೆ. ತಡೆಯಾಜ್ಞೆ ತರುವ ಮೂಲಕ ತಮ್ಮದೂ ಸಿಡಿ ಇದೆ ಎಂದು ಗೌಡರು ಸ್ವಯಂ ಒಪ್ಪಿಕೊಂಡಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಕೇಂದ್ರ ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಕಿಡಿಗೇಡಿಗಳು ನಕಲಿ ಸಿಡಿ ಸೃಷ್ಟಿಸಿ ಮಾಧ್ಯಮಗಳಲ್ಲಿ ಹರಿಬಿಡುವ ಸಾಧ್ಯತೆಯೂ ಇದೆ ಎಂದು ಕಾರಣ ನೀಡಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಇಂಥ ವಿಡಿಯೋ ಪ್ರಸಾರ ಮಾಡಿದರೆ ಘನತೆಗೆ ಧಕ್ಕೆ ಆಗಲಿದೆ.  ಆದ್ದರಿಂದ ತಮ್ಮ ಬಗ್ಗೆಯೂ ಇಂತಹ ವಿಡಿಯೋ ಪ್ರಸಾರ ಮಾಡುವ ಅಪಾಯವಿದ್ದು, ಚಾರಿತ್ರ್ಯ ವಧೆಯಾಗಲಿದೆ ಎಂದು ಡಿವಿಎಸ್  ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಮಾನ್ಯ ಮಾಡಿದ ಕೋರ್ಟ್, ಮಾನಹಾನಿಕರ ವರದಿ ಮಾಡದಂತೆ ನಿರ್ಬಂಧ ವಿಧಿಸಿದೆ.

ENGLISH SUMMARY…

Cong ridicules stay order by Union Minister D.V. Sadananda Gowda
Bengaluru, July 3, 2021 (www.justkannada.in): The Karnataka State Congress party has ridiculed Union Minister D.V. Sadananda Gowda’s move in getting a stay order from the Court as a precautionary measure to prevent the media from showing insulting reports against him.
The State Congress party, in its tweet, has mentioned that the Union Minister has availed stay orders in order to prevent the media from releasing the CD, he is the 7th person in BJP who has done like this! It is very curious to know why only the BJP people are scared about CDs?! By bringing stay order the Union Minister D.V. Sadananda Gowda has agreed that there is a CD belonging to him also.
The Union Minister D.V. Sadananda Gowda had approached the Hon’ble Court fearing that fraudsters may create his duplicate CD during the Union Cabinet reshuffle. Considering that if such a CD is shown in the media it would harm his career and destroy his character. Hence, he had approached the court. The court has however considered his appeal and has restricted publishing or transmission of any such reports.
Keywords: Union Minister/ D.V. Sadananda Gowda/ State Congress party/ ridicules/ court/ stay order/ media reports/ CD

Key words: Congress -Union Minister- DV Sadananda Gowda-stay order-CD