ಮೈಸೂರು,ಜನವರಿ,5,2021(www.justkannada.in): ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಗಿಂತ ಹೆಚ್ಚು ಕಾಂಗ್ರೆಸ್ ಬೆಂಬಲಿಗರು ಆಯ್ಕೆಯಾಗಿದ್ದಾರೆ. ಗ್ರಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು ಈ ಹಿನ್ನೆಲೆ ಜನವರಿ 13 ರಂದು ಮಾಜಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಗ್ರಾಮ ಜನಾಧಿಕಾರ ಸನ್ಮಾನ” ಕಾರ್ಯಕ್ರಮ ನಡೆಸುತ್ತೇವೆ ಎಂದು ಮಾಜಿ ಸಂಸದ ಆರ್.ದೃವನಾರಾಯಣ್ ತಿಳಿಸಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ಆರ್.ಧೃವನಾರಾಯಣ್, ಮೈಸೂರು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಿದೆ. ಫಲಿತಾಂಶದ ದಿನ ಮಧ್ಯರಾತ್ರಿ ವರೆಗೂ ಎಣಿಕೆ ನಡೆಯುತ್ತಿತ್ತು. ಬಿಜೆಪಿಯವರು ಫಲಿತಾಂಶ ಮುಗಿಯುವ ಮುನ್ನವೇ ನಮ್ಮ ಪಕ್ಷ ಹೆಚ್ಚು ಸ್ಥಾನಗಳಿಸಿದೆ ಎಂದು ಮಧ್ಯಾಹ್ನಕ್ಕೆ ಹೇಳುತ್ತಿದ್ದರು. ಇದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.
ಗ್ರಾ.ಪಂ ಚುನಾವಣಾ ಫಲಿತಾಂಶದಲ್ಲೂ ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವೇ ಮುಂದಿದೆ. 129 ಗ್ರಾಮಪಂಚಾಯ್ತಿಗಳ ಪೈಕಿ 76 ರಲ್ಲಿ ಪೂರ್ಣಪ್ರಮಾಣದಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದೆ. ಜಿಲ್ಲೆಯಲ್ಲಿ 2159 ಮಂದಿ ಅಭ್ಯರ್ಥಿಗಳ ಪೈಕಿ 1135 ಮಂದಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ. ಮೈಸೂರಿನಲ್ಲಿ ಬಿಜೆಪಿ 3ನೇ ಸ್ಥಾನದಲ್ಲಿದೆ. ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ನಾಯಕತ್ವಕ್ಕೆ ಜನ ಮಣೆ ಹಾಕಿದ್ದಾರೆ. ಈ ಎರಡು ಜಿಲ್ಲೆಯಲ್ಲಿ ಕಾಂಗ್ರೆಸ್ ತನ್ನ ಸ್ಥಾನ ಉಳಿಸಿಕೊಂಡಿದೆ ಎಂದು ಆರ್ ಧ್ರುವನಾರಾಯಣ್ ನುಡಿದರು.
ಮೀಸಲಾತಿ ಹಾಗೂ ಮಹಿಳಾ ಮಿಸಲಾತಿಗೂ ಕಾಂಗ್ರೆಸ್ ಪಕ್ಷ ಅವಕಾಶ ಮಾಡಿಕೊಟ್ಟಿತು. ಅಧಿಕಾರ ವಿಕೇಂದ್ರೀಕರಣವಾಗಬೇಕು ಎನ್ನುವ ಆಶಯ ಇತ್ತು. ಕಾಂಗ್ರೆಸ್ ಗ್ರಾಮಪಂಚಾಯ್ತಿಗಳಿಗೆ ಅಧಿಕಾರ ತಂದುಕೊಟ್ಟಿದೆ. ಈ ಎರಡು ಜಿಲ್ಲೆಗಳಿಗೂ ಮಾಜಿ ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ಉತ್ತಮ ಯೋಜನೆ ಹಾಗೂ ಅಭಿವೃದ್ದಿ ಕೆಲಸ ಮಾಡುರುವುದರಿಂದ ಜನ ಕೈ ಹಿಡಿದಿದ್ದಾರೆ. ಎರಡು ಜಿಲ್ಲೆಯಲ್ಲೂ ಹೆಚ್ಚು ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ ಎಂದು ಆರ್.ಧೃವನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಹಿನ್ನೆಲೆ. ಮಾಜಿ ಸಿಎಂ ಸಿದ್ದರಾಮಯ್ಯ ಸಾರಥ್ಯದಲ್ಲಿ ” ಇದೆ ತಿಂಗಳ 13ರಂದು ವರುಣದಲ್ಲಿ ಗ್ರಾಮ ಜನಾಧಿಕಾರ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಇನ್ನಷ್ಟು ಬಲವರ್ಧನೆಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಹೊಸ ನೀಲಿನಕ್ಷೆ ಸಿದ್ಧವಾಗಲಿದೆ. ಹೆಚ್.ಡಿಕೋಟೆ, ಕೆ.ಆರ್ ನಗರ, ನಂಜನಗೂಡು ಹಾಗೂ ವರುಣ ವಿಧಾನಸಭಾ ಕ್ಷೇತ್ರಗಳಲ್ಲಿ ಗ್ರಾಮ ಜನಾಧಿಕಾರ ಸನ್ಮಾನ ನಡೆಯಲಿದೆ ಎಂದು ಆರ್.ಧೃವನಾರಾಯಣ್ ಹೇಳಿದರು.
ಕೊರೊನಾ ವ್ಯಾಕ್ಸಿನ್ ವಿಚಾರದಲ್ಲಿ ಬಿಜೆಪಿ ನೂರಕ್ಕೆ ನೂರು ರಾಜಕೀಯ…..
ಕೊರೊನಾ ವ್ಯಾಕ್ಸಿನ್ ವಿಚಾರದಲ್ಲಿ ರಾಜಕೀಯ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ಧೃವನಾರಾಯಣ್, ಈ ವಿಚಾರದಲ್ಲಿ ಬಿಜೆಪಿ ನೂರಕ್ಕೆ ನೂರು ರಾಜಕೀಯ ಮಾಡುತ್ತಿದೆ. ಇದನ್ನು ರಾಜಕೀಯ ಮಾಡಬಾರದು. ನಮಗೆ ರಾಜಕೀಯ ಮಾಡುವ ಉದ್ದೇಶ ಇಲ್ಲ.
ಬಿಹಾರ ಚುನಾವಣೆ ವೇಳೆಯೇ ಇದು ಸಾಬೀತಾಗಿದೆ. ಕೋವಿಡ್ ವಿಚಾರದಲ್ಲಿ ಬಿಜೆಪಿಗೆ ವಿಶಾಲ ಮನಸ್ಥಿತಿ ಇರಬೇಕಾಗಿತ್ತು. ಆದರೆ ಬಿಜೆಪಿಯವರು ಅದನ್ನು ಹೊಂದಿಲ್ಲ. ಕೋವಿಡ್ ವ್ಯಾಕ್ಸಿನ್ ಸಂಪೂರ್ಣ ಮಾಹಿತಿಯನ್ನು ಜನರಿಗೆ ನೀಡಬೇಕು. ಈ ಬಗ್ಗೆ ಇರುವ ಗೊಂದಲವನ್ನು ಬಗೆಹರಿಸಬೇಕು. ವ್ಯಾಕ್ಸಿನ್ ಕೊಡುವ ಮುನ್ನ ಎಲ್ಲಾ ಅನುಮಾನಗಳಿಗೆ ಉತ್ತರ ಕೊಡಬೇಕು ಎಂದು ಧೃವನಾರಾಯಣ್ ಆಗ್ರಹಿಸಿದರು.
English summary….
Cong. victory in GP elections: former MP Dhruvanarayan announces ‘Grama Janaadhikara Sanman’ program on Jan. 13
Mysuru, Jan.05, 2021 (www.justkannada.in): Chamarajanagara former MP R. Dhurvanarayana today informed that more Congress members have won in the gram panchayat elections than JDS and BJP. Congress has registered a huge victory. A ‘Gram Janaadhikara Sanman’ program will be held on Jan. 13, under the leadership of former Chief Minister Siddaramaiah.
Addressing a press meet in Mysuru today he said that the Congress party had won in more places in Chamarajanagara and Mysuru Districts in the recently concluded gram panchayat elections. Out of the 129 gram panchayats in Chamarajanagara, Congress has won 76 seats. Out of the total 2159 candidates, 1135 candidates of our party have won. The BJP is in third place in Mysuru. People have opted for Siddaramaiah’s leadership in Chamarajanagara and Mysuru Districts, he said.
Keywords: Congress –wins- GP election- “Grama janadikara sanmana – Jan. 13- mysore -Former MP Dhruvanarayan.
Key words: Congress –wins- GP election- “Grama janadikara sanmana – Jan. 13- mysore -Former MP Dhruvanarayan.